ಸ್ಥಳೀಯ ಕಲಾವಿದರು, ಬಿಗ್ ಸ್ಟಾರ್ಗಳು – ಜಾಹೀರಾತು ಖರ್ಚಿನಲ್ಲಿ ಬೆರೆದ ‘ಸ್ಯಾಂಡಲ್ ಸೋಪ್’ ಕಥೆ


ಕರ್ನಾಟಕದ ಸುವಾಸನೆಯ ಪ್ರತೀಕವಾಗಿರುವ ಮೈಸೂರು ಸ್ಯಾಂಡಲ್ ಸೋಪ್ ದೇಶವ್ಯಾಪಿ ಮಾತ್ರವಲ್ಲ, ವಿದೇಶಗಳಲ್ಲಿಯೂ ತನ್ನ ವಿಶಿಷ್ಟ ಮೌಲ್ಯವನ್ನು ಉಳಿಸಿಕೊಂಡಿದೆ. ಆದರೆ ಈ ಬಾರಿ ಸಾಬೂನು ತನ್ನ ಗುಣಮಟ್ಟಕ್ಕಿಂತ ಹೆಚ್ಚು, ಅದರ ಜಾಹೀರಾತು ವೆಚ್ಚದಿಂದ ಸುದ್ದಿಯಾಗಿದೆ.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರಕ್ಕಾಗಿ ಒಟ್ಟು ₹48,88,21,350 ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪನ್ನದ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದೆ.
ತಮನ್ನಾಗೆ 6.20 ಕೋಟಿ ಸಂಭಾವನೆ, 2025-27 ಅವಧಿಗೆ ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ನಟಿ ತಮನ್ನಾ ಭಾಟಿಯಾ ಅವರಿಗೆ ಒಟ್ಟು ₹6.20 ಕೋಟಿ ಪಾವತಿಸಲಾಗಿದೆ. ತಮನ್ನಾಳ ಪ್ಯಾನ್-ಇಂಡಿಯಾ ಇಮೇಜ್‌ನಿಂದ ಉತ್ಪನ್ನಕ್ಕೆ ರಾಷ್ಟ್ರವ್ಯಾಪಿ ಹಾಗೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಬೀಳುತ್ತದೆ ಎಂಬ ನಿರೀಕ್ಷೆಯಿದೆ.
ಇಶಾನಿ ಶೆಟ್ಟಿಗೆ 15 ಲಕ್ಷ, ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕಾಗಿ ಇನ್ನೊಬ್ಬ ರಾಯಭಾರಿಯಾಗಿ ಐಷಾನಿ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದ್ದು, ಅವರಿಗೆ ₹15 ಲಕ್ಷ ಪಾವತಿಸಲಾಗಿದೆ. ಸ್ಥಳೀಯ ಕಲಾವಿದರಿಗೆ 62.87 ಲಕ್ಷ ಸಿನಿಮಾ ತಾರೆಯರ ಜೊತೆಗೆ ಕರ್ನಾಟಕದ ಸ್ಥಳೀಯ ಕಲಾವಿದರನ್ನೂ ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗಿದೆ. ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನ್ಯಾ ಐಯ್ಯರ್, ಆರಾಧನಾ.ಆರ್.
ಈ ಕಲಾವಿದರು ದೂರದರ್ಶನ ಜಾಹೀರಾತುಗಳು, ಡಿಜಿಟಲ್ ರೀಲ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಸೇವೆಗೆ ಒಟ್ಟು ₹62.87 ಲಕ್ಷ ವೆಚ್ಚ ಮಾಡಲಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ಗೆ ಇರುವ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಲು, ದೊಡ್ಡ ಮಟ್ಟದ ಜಾಹೀರಾತು ಅಭಿಯಾನವನ್ನು ರೂಪಿಸಲಾಗಿದೆ. ಪ್ಯಾನ್-ಇಂಡಿಯಾ ನಟಿ ತಮನ್ನಾಳನ್ನು ರಾಯಭಾರಿಯಾಗಿ ನೇಮಕ ಮಾಡುವ ಮೂಲಕ ಬ್ರ್ಯಾಂಡ್‌ಗೆ ಹೆಚ್ಚಿನ ಮೌಲ್ಯವನ್ನೂ, ಮಾರುಕಟ್ಟೆಯಲ್ಲಿ ಪ್ರಭಾವವನ್ನೂ ತರುವ ಉದ್ದೇಶವಿದೆ.
ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕಾಗಿ 48.88 ಕೋಟಿ ರೂಪಾಯಿ ವೆಚ್ಚ ಮಾಡಿದ ವಿಷಯ ಈಗ ಜನರ ಚರ್ಚೆಯ ಕೇಂದ್ರವಾಗಿದೆ. ತಮನ್ನಾಳ ₹6.20 ಕೋಟಿ ಸಂಭಾವನೆ ಒಂದು ಬದಿಯಲ್ಲಿ ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದರೆ, ಸ್ಥಳೀಯ ಕಲಾವಿದರಿಗೆ ಸಹ ಅವಕಾಶ ನೀಡಿರುವುದು ಮತ್ತೊಂದು ಬದಿಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.