ಬಘೀರ ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಜೋಡಿಯ ಮೌನ ಪ್ರೀತಿಯ ಸ್ಪರ್ಶ ಸಾಂಡಲ್‌ವುಡ್‌ನ ಬಹುನಿರೀಕ್ಷಿತ "ಬಘೀರ" ಸಿನಿಮಾದಲ್ಲಿ ನಟ ಶ್ರೀಮುರಳಿ ಮತ್ತು ನಟಿ ರುಕ್ಮಿಣಿ ವಸಂತ್‌ರಿಬ್ಬರೂ ವಿಶೇಷ ಜೋಡಿಯಾಗಿ ಕಂಗೊಳಿಸಿದ್ದಾರೆ. "ಪರಿಚಯವಾದೇ ಪರಿ ಪರಿ" ಹಾಡಿನ ಮೂಲಕ ಇವರ ಮೌನ ಪ್ರೀತಿಯ ಸೊಗಸು ಸಿನಿಮಾಭಿಮಾನಿಗಳಿಗೆ ಸ್ಪೆಷಲ್ ಫೀಲ್ ನೀಡುತ್ತಿದೆ.
ಈ ಹಾಡಿನಲ್ಲಿ ಶ್ರೀಮುರಳಿ ಪೊಲೀಸ್ ಪಾತ್ರದಲ್ಲಿ, ಮತ್ತು ರುಕ್ಮಿಣಿ ವೈದ್ಯೆಯ ಪಾತ್ರದಲ್ಲಿ ಮಿಂಚಿದ್ದು, ಅವರ ಜೋಡಿಯ ಕೆಮಿಸ್ಟ್ರಿ ಪರದೆಯ ಮೇಲೆ ಮುದ್ದಾಗಿ ಮೂಡಿಬಂದಿದೆ. ಕಾಂತಾರ ಚಿತ್ರಕ್ಕೆ ಗೀತೆ ಬರೆದ ಪ್ರಮೋದ್ ಮರವಂತೆ, ಈ ಹಾಡಿಗೂ ಅದ್ಭುತ ಸಾಲುಗಳನ್ನು ರಚನೆ ಮಾಡಿದ್ದಾರೆ.
ಶ್ರೀಮುರಳಿ-ರುಕ್ಮಿಣಿ ವಸಂತ್ ಈ ಹೊಸ ಜೋಡಿಯನ್ನು ಅಭಿಮಾನಿಗಳು ಈಗಾಗಲೇ ಮೆಚ್ಚಿದ್ದು, ಪ್ರೀತಿಯ ತೀವ್ರತೆ ತುಂಬಿದ ಈ ಹಾಡು ತಮ್ಮ ಮನಸೆಳೆಯುತ್ತಿದೆ.