ಸಿಕ್ಸ್ ಪ್ಯಾಕ್ ಮೂಲಕ ಸೆನ್ಸೇಷನ್ ಸೃಷ್ಟಿಸಿದ ‘ನೆನಪಿರಲಿ’ ಪ್ರೇಮ್


ಸಿಕ್ಸ್ ಪ್ಯಾಕ್ ಮೂಲಕ ಸೆನ್ಸೇಷನ್ ಸೃಷ್ಟಿಸಿದ ‘ನೆನಪಿರಲಿ’ ಪ್ರೇಮ್ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು ತಮ್ಮ ಹೊಸ ಬಾಡಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಿಂದ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಚಾಕೋಲೇಟ್ ಬಾಯ್ ಇಮೇಜ್ ಹೊಂದಿದ್ದ ಪ್ರೇಮ್ ಈ ಬಾರಿ ತೀವ್ರ ವರ್ಕೌಟ್ ಮೂಲಕ ಸಿಕ್ಸ್ ಪ್ಯಾಕ್ ಬಾಡಿ ತಯಾರಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
48ನೇ ವರ್ಷದಲ್ಲಿಯೂ ಪ್ರೇಮ್ ಅವರು ಪಡೆದ ಈ ಫಿಟ್‌ನೆಸ್ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದೆ. ಕೆಲವರು ಅವರ ಡೆಡಿಕೇಷನ್‌ನ್ನು ಮೆಚ್ಚಿಕೊಂಡು, ಬಾಲಿವುಡ್ ಹೀರೋ ಹೃತಿಕ್ ರೋಷನ್ ಅವರ ಜೊತೆ ಪ್ರೇಮ್ ಅವರನ್ನು ಹೋಲಿಸಿದ್ದಾರೆ.