ಅರ್ಜುನ್ ಸರ್ಜಾ ‘ಸೀತಾ ಪಯಣ’ ಚಿತ್ರದಲ್ಲಿ ವಿಶೇಷ ಪಾತ್ರ!


ಅರ್ಜುನ್ ಸರ್ಜಾ ‘ಸೀತಾ ಪಯಣ’ ಚಿತ್ರದಲ್ಲಿ ವಿಶೇಷ ಪಾತ್ರ! ಸ್ಯಾಂಡಲ್‌ವುಡ್‌ನ ಹಿರಿಯ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾ ಅವರ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣ’ ಈ ಬಾರಿ ವಿಭಿನ್ನ ಕಥಾ ಹಂದರದೊಂದಿಗೆ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಅರ್ಜುನ್ ಅವರ ಮಗಳು ಐಶ್ವರ್ಯ ಅರ್ಜುನ್ ನಾಯಕಿಯಾಗಿ ನಟಿಸುತ್ತಿದ್ದು, ನಿರಂಜನ್ ಸುಧೀಂದ್ರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಪ್ರಖ್ಯಾತ ನಟರಾದ ಪ್ರಕಾಶ್ ರೈ ಮತ್ತು ಸತ್ಯರಾಜ್ ಅವರ ಬರುವಿಕೆಯಿಂದ ಕತೆಗೂ ಹೊಸ ಬಲ ಬಂದಿದೆ. ಸದ್ಯ, ಅರ್ಜುನ್ ಸರ್ಜಾ ಅವರು ಸ್ವತಃ ಈ ಚಿತ್ರದಲ್ಲಿ ‘ಗಿರಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸ ಲುಕ್ ಮತ್ತು ಸ್ಟೈಲ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಲಾಂಗ್ ಹೇರ್ ಮತ್ತು ಸ್ಟೈಲಿಶ್ ಅವತಾರದಲ್ಲಿ ಹಾಜರಾಗಿರುವ ಅರ್ಜುನ್ ಸರ್ಜಾ ತಮ್ಮದೇ ನಿರ್ದೇಶನದ ಈ ಚಿತ್ರಕ್ಕೆ ವಿನೂತನ ರಂಗ ತಂದುಕೊಟ್ಟಿದ್ದಾರೆ.
‘ಸೀತಾ ಪಯಣ’ ಚಿತ್ರವನ್ನು ಕನ್ನಡ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರಲಿದ್ದು, ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ಗಳು ಪ್ರೇಕ್ಷಕರಲ್ಲಿ ಕುತೂಹಲವನ್ನು ಉಂಟುಮಾಡಿವೆ.