Back to Top

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯಶ್ ತಾಯಿ ಪುಷ್ಪಾ – ‘ಕೊತ್ತಲವಾಡಿ’ ವಿವಾದದ ಹಿಂದೆ ಏನಿದೆ?

SSTV Profile Logo SStv August 12, 2025
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯಶ್ ತಾಯಿ ಪುಷ್ಪಾ
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯಶ್ ತಾಯಿ ಪುಷ್ಪಾ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಕೊತ್ತಲವಾಡಿ’ ಚಿತ್ರ ಸುತ್ತಮುತ್ತ ಹೊಸ ಚರ್ಚೆ ಮತ್ತು ವಿವಾದಗಳ ಅಲೆ ಎದ್ದಿದೆ. ಯಶ್ ತಾಯಿ ಎಂದು ಹೆಸರುವಾಸಿಯಾಗಿರುವ ಪುಷ್ಪಾ ಅರುಣ್ ಕುಮಾರ್ ನಿರ್ಮಿಸಿರುವ ಈ ಸಿನಿಮಾ ಆಗಸ್ಟ್ 1ರಂದು ತೆರೆಗೆ ಬಂತು. ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ ಈ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ ಸೇರಿದಂತೆ ಅನೇಕರು ಪ್ರಮುಖ ಪಾತ್ರವಹಿಸಿದ್ದಾರೆ.

ಆದರೆ ಚಿತ್ರದ ಕಥೆ, ನಟನಾ ಶೈಲಿ, ತಾಂತ್ರಿಕತೆ ಬಗ್ಗೆ ಚರ್ಚೆಯಾಗಬೇಕಾದ ಸಮಯದಲ್ಲಿ, ಚಿತ್ರ ಬಿಡುಗಡೆಯಾದ ಕೂಡಲೇ ನೆಗಟಿವ್ ವಿಮರ್ಶೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದವು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಾಪಕಿ ಪುಷ್ಪಾ, “ಸಿನಿಮಾವನ್ನು ನೋಡದೇ ನೆಗೆಟಿವ್ ಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರವೇ ಕ್ರಮ ಕೈಗೊಳ್ಳಬೇಕು” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಪುಷ್ಪಾ ಅವರ ಆಕ್ರೋಶ;

  • “ನಮ್ಮ ಸಿನಿಮಾದ ಪ್ರಚಾರ ನೋಡಿದ ಕೆಲವರು ಸಿನಿಮಾ ಬಿಡುಗಡೆಯಾಗುವ ಮುಂಚೆಲೇ ನೆಗೆಟಿವ್ ಟಾಕ್ ಹಬ್ಬಿಸಿದರು”
  • “ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ, ಹತ್ತು ತೊಂದರೆಗಳ ನಡುವೆ ಶ್ರಮಿಸಿ ಸಿನಿಮಾವನ್ನು ತೆರೆಗೆ ತರುತ್ತೇವೆ”
  • “ಸಿನಿಮಾ ನೋಡಿದ ಮೇಲೆ ವಿಮರ್ಶೆ ಮಾಡಿದರೆ ತೊಂದರೆ ಇಲ್ಲ, ಆದರೆ ನೋಡದೆ ತಪ್ಪು ಮಾಹಿತಿ ಹಬ್ಬಿಸುವುದು ಅನೈತಿಕ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರು ಇನ್ನಷ್ಟು ಮುಂದೆ ಹೋಗಿ, “ಮುಖ್ಯಮಂತ್ರಿಗಳನ್ನೇ ಭೇಟಿಯಾಗಿ ಈ ಬಗ್ಗೆ ದೂರು ನೀಡುತ್ತೇನೆ. ಕ್ರಮ ಕೈಗೊಳ್ಳದಿದ್ದರೆ ರಾಕ್‍ಲೈನ್ ವೆಂಕಟೇಶ್ ಜೊತೆಗೂಡಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು. ಪುಷ್ಪಾ ಅವರ ಅಭಿಪ್ರಾಯದಲ್ಲಿ, ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಓಡದಿರುವುದಕ್ಕೆ, ನೋಟದೆ ನಿಂದಿಸುವ “ಕೀಬೋರ್ಡ್ ವಿಮರ್ಶಕರು” ಪ್ರಮುಖ ಕಾರಣ.  “ನನ್ನ ಹೂಡಿಕೆಯನ್ನು ನಾನು ತಡೆದುಕೊಳ್ಳುತ್ತೇನೆ. ಆದರೆ, ಇನ್ನೊಬ್ಬರಿಗೆ ಹಾನಿ ಆಗುವುದು ಸಹಿಸೋಲ್ಲ. ಇಂಥವರ ವಿರುದ್ಧ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲೇಬೇಕು.” ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೆಗೆಟಿವ್ ಕಾಮೆಂಟ್ಸ್ ಹರಿದಾಡಿದ ಪರಿಣಾಮ, ಪ್ರೇಕ್ಷಕರಲ್ಲಿ ಒಲವು ಕಡಿಮೆಯಾಗುವ ಭೀತಿ ನಿರ್ಮಾಪಕರಲ್ಲಿ ಹುಟ್ಟಿದೆ.
ಪುಷ್ಪಾ ಅವರ ಅಭಿಪ್ರಾಯದಲ್ಲಿ, ಈ ರೀತಿಯ ಅನಧಿಕೃತ ನಿಂದನೆಗಳು ಚಿತ್ರದ ಬಾಕ್ಸ್ ಆಫೀಸ್ ಕಲಕ್ಷನ್‌ಗೂ, ತಂಡದ ಮನೋಬಲಕ್ಕೂ ನೇರ ಹೊಡೆತ ನೀಡುತ್ತವೆ.

ಪುಷ್ಪಾ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ಕಾರಣ, ಕನ್ನಡ ಚಿತ್ರರಂಗದಲ್ಲಿ “ನೋಟದೆ ನಿಂದನೆ” ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಚರ್ಚೆ ಪ್ರಾರಂಭವಾಗಬಹುದು. ಇದರಿಂದ ನಿರ್ಮಾಪಕರಿಗೆ ಸ್ವಲ್ಪ ರಕ್ಷಣೆಯಾದರೂ ಸಿಗಬಹುದಾದರೆ, ಪ್ರೇಕ್ಷಕರ ಅಭಿಪ್ರಾಯ ಹಂಚಿಕೊಳ್ಳುವ ಹಕ್ಕಿಗೂ ಇದು ಸವಾಲಾಗಬಹುದು. ‘ಕೊತ್ತಲವಾಡಿ’ ವಿವಾದ ಇನ್ನೂ ತಾಜಾ ಹಂತದಲ್ಲಿದೆ. ಪುಷ್ಪಾ ಅವರ ಎಚ್ಚರಿಕೆ ಸರ್ಕಾರ ಮತ್ತು ಚಿತ್ರರಂಗದಲ್ಲಿ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ ಒಂದು ವಿಷಯ ಖಚಿತ – ಕನ್ನಡ ಚಿತ್ರರಂಗದಲ್ಲಿ ನೆಗಟಿವ್ ಪ್ರಚಾರ vs ನಿರ್ಮಾಪಕರ ಹೋರಾಟ ಈಗ ಹೊಸ ಹಂತಕ್ಕೆ ಪ್ರವೇಶಿಸಿದೆ.