Back to Top

ಸಂತೋಷ್ ಎಸ್ ಲಾಡ್ ಅನಾವರಣ ಮಾಡಿದ "31 DAYS" ಟೀಸರ್ – ಸೆಪ್ಟೆಂಬರ್ 5ಕ್ಕೆ ಭರ್ಜರಿ ಬಿಡುಗಡೆ

SSTV Profile Logo SStv August 16, 2025
ಸಂತೋಷ್ ಎಸ್ ಲಾಡ್ ಅನಾವರಣ ಮಾಡಿದ "31 DAYS" ಟೀಸರ್
ಸಂತೋಷ್ ಎಸ್ ಲಾಡ್ ಅನಾವರಣ ಮಾಡಿದ "31 DAYS" ಟೀಸರ್

"ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ "31 DAYS". ಈಗಾಗಲೇ ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಜನರ ಮನಸಿಗೆ ಹತ್ತಿರವಾಗಿರುವ ಈ ಚಿತ್ರದ ಟೀಸರ್ ಹಾಗೂ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅನಾವರಣ ಮಾಡಿದರು.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಸಂತೋಷ್ ಎಸ್ ಲಾಡ್, ಈ ಚಿತ್ರದ ನಾಯಕ ನಿರಂಜನ್ ಶೆಟ್ಟಿ‌ ನನಗೆ ಬಹಳ ವರ್ಷಗಳ ಸ್ನೇಹಿತ. ಇದು ಅವರು ನಾಯಕನಾಗಿ ನಟಿಸಿರುವ 8 ನೇ ಚಿತ್ರ ಹಾಗೂ ವಿ.ಮನೋಹರ್ ಅವರು ಸಂಗೀತ ನೀಡಿರುವ 150ನೇ ಚಿತ್ರ ಅಂತ ತಿಳಿದು ಬಹಳ ಸಂತೋಷವಾಯಿತು.‌ ಟೀಸರ್ ನೋಡಿದಾಗ ಕುತೂಹಲ ಮೂಡಿತ್ತು. ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ ಎಂಬ ಭರವಸೆ ಬಂತು. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎನ್ನುವುದಕ್ಕೆ " ಸು ಫ್ರಮ್ ಸೋ" ಯಶಸ್ಸೇ ಸಾಕ್ಷಿ. "31 DAYS" ಚಿತ್ರ ಕೂಡ ಉತ್ತಮ ಕಂಟೆಂಟ್ ವುಳ್ಳ ಚಿತ್ರವಾಗಿದೆ. ಕನ್ನಡ ಕಲಾರಸಿಕರು ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಭರ್ಜರಿ ಯಶಸ್ಸು ತಂದುಕೊಡಬೇಕು. ಚಿತ್ರ ಸೂಪರ್ ಹಿಟ್ ಆಗಬೇಕು ಎಂದು ಹಾರೈಸಿದರು. Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸಿರುವ "31DAYS" ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸಿದ್ದಾರೆ.  ನಿರಂಜನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ.  

11 ಹಾಡುಗಳಿರವ ಸಂಗೀತ ಪ್ರಧಾನ ಈ ಚಿತ್ರಕ್ಕೆ ವಿ. ಮನೋಹರ್ ರವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು.  ವಿನುತ್. K  ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ನಿಖಿತ್ ಪೂಜಾರಿ ರವರ ಸಂಕಲನ ಈ ಚಿತ್ರಕ್ಕಿದೆ. "31 DAYS" ಚಿತ್ರ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು 31 ದಿನಗಳಲ್ಲಿ ನಡೆಯುವ high voltage love story ಇದಾಗಿದೆ.