ಸುದೀಪ್ ತಾಯಿ ಅಗಲಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ಪ್ರಸಿದ್ಧ ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಅ.20ರಂದು ನಿಧನ ಹೊಂದಿದ ಬೆನ್ನಲ್ಲೇ ಚಿತ್ರರಂಗದ ಹಲವಾರು ಗಣ್ಯರು, ಸ್ನೇಹಿತರು ಸಂತಾಪ ಸೂಚಿಸಿದರು. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸುದೀಪ್ ಅವರ ತಾಯಿಯ ಅಗಲಿಕೆಗೆ ಸಂತಾಪ ಸೂಚಿಸಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಪ್ರಧಾನ ಮಂತ್ರಿಗಳ ಸಂಕೇತಪೂರ್ಣ ಸಂತಾಪವು ತಮಗೆ ಹೇಗೆ ಸಾಂತ್ವಾನ ನೀಡಿದೆಯೋ ಬರೆದಿದ್ದಾರೆ.
ಅ.23ರಂದು ಬಂದ ಪ್ರಧಾನ ಕಚೇರಿಯ ಪತ್ರದಲ್ಲಿ ಮೋದಿ, ತಾಯಿ ಸರೋಜಾ ಅವರ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ತಾಯಿಯ ಮಮತೆಯ ಆಸ್ತಿತ್ವವನ್ನು ಈ ಜಗತ್ತಿನಲ್ಲಿ ಬೇರೆ ಯಾವುದೂ ತುಂಬಲಾರದು" ಎಂದು ಉಲ್ಲೇಖಿಸಿರುವ ಮೋದಿ, ತಾಯಿಯ ನೆನಪುಗಳು ಸುದೀಪ್ ಅವರ ಜೀವನದಲ್ಲಿ ಸ್ಫೂರ್ತಿಯಾಗಿ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದರು.
ಸುದೀಪ್, "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ, ನಿಮ್ಮ ಸಂದೇಶ ನನ್ನ ಹೃದಯ ತಟ್ಟಿದೆ, ಈ ದುಃಖದ ಸಮಯದಲ್ಲಿ ನಿಮ್ಮ ಮಾತುಗಳು ನಮ್ಮ ಕುಟುಂಬಕ್ಕೆ ಆಧಾರವಾಗಿದೆ," ಎಂದು ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದರು.