‘S/O ಮುತ್ತಣ್ಣ’ ಟೀಸರ್ ರಿಲೀಸ್ – ದೇವರಾಜ್ ಪುತ್ರ ಪ್ರಣಂ ನಟನೆಯ ಚಿತ್ರಕ್ಕೆ ಶಿವಣ್ಣ ಸಾಥ್ ನಟ ದೇವರಾಜ್ ಅವರ ಪುತ್ರ ಪ್ರಣಂ ದೇವರಾಜ್ ನಟನೆಯ ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಈ ವಿಶೇಷ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಪ್ರಣಂ ಅವರ ನಟನೆಯ ಹಾಗೂ ಅಪ್ಪ-ಮಗನ ಬಾಂಧವ್ಯವನ್ನು ಕಟ್ಟಿಕೊಡುವ ಈ ಚಿತ್ರ, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಶಿವರಾಜ್ ಕುಮಾರ್ ಮಾತನಾಡಿ, ದೇವರಾಜ್ ಅವರ ಕುಟುಂಬದ ಮೇಲೆ ಪ್ರೀತಿ ಹಾಗೂ ಅಭಿಮಾನವಿದೆ. ಟೀಸರ್‌ನಲ್ಲಿ ತಂದೆ-ಮಗನ ಸಂವೇದನೆಯನ್ನು ಚೆನ್ನಾಗಿ ಮೂಡಿಸಲಾಗಿದೆ ಎಂದಿದ್ದಾರೆ. ರಂಗಾಯಣ ರಘು ಅವರು ಅಪ್ಪನ ಪಾತ್ರದಲ್ಲಿ, ಖುಷಿ ರವಿ ನಾಯಕಿಯಾಗಿ ಪ್ರಣಂಗೆ ಜೋಡಿಯಾಗಿದ್ದಾರೆ.
ಶ್ರೀಕಾಂತ್ ಹುಣಸೂರು ನಿರ್ದೇಶನದ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಸುಧಾ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡಿದ್ದು, ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದಾರೆ. ಪುರಾತನ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿತ ಈ ಸಿನಿಮಾ, ಪ್ರೇಕ್ಷಕರಿಗೆ ಅಪ್ಪ-ಮಗನ ಬಾಂಧವ್ಯದ ಹೃದಯಸ್ಪರ್ಶಿ ಕಥೆಯನ್ನು ತರುವ ನಿರೀಕ್ಷೆಯಿದೆ.