ರಾಕಿಂಗ್ ಸ್ಟಾರ್ ನ್ಯೂ ಲುಕ್ ಯಶ್ ಸ್ಟೈಲಿಶ್ ನೋಟಕ್ಕೆ ಫ್ಯಾನ್ಸ್ ಫಿದಾ


ರಾಕಿಂಗ್ ಸ್ಟಾರ್ ನ್ಯೂ ಲುಕ್ ಯಶ್ ಸ್ಟೈಲಿಶ್ ನೋಟಕ್ಕೆ ಫ್ಯಾನ್ಸ್ ಫಿದಾ ರಾಕಿಂಗ್ ಸ್ಟಾರ್ ಯಶ್ ತಮ್ಮ ಹೊಸ ಸ್ಟೈಲಿಶ್ ಲುಕ್ನಿಂದ ಫ್ಯಾನ್ಸ್‌ನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಇಂಗ್ಲೀಷ್ ಚಾನಲ್ ಒಂದಕ್ಕೆ ಸಂದರ್ಶನ ನೀಡಿದ ವೇಳೆ ತೆಗೆದಿರುವ ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯಶ್ ಸಖತ್ ಕೂಲ್ ಆಗಿ ಕಾಣಿಸುತ್ತಿದ್ದಾರೆ.
ಯಶ್ ತಮ್ಮ ಹೊಸ ಸಿನಿಮಾ ಟಾಕ್ಸಿಕ್ ಚಿತ್ರದಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ಮಾಡಲಾಗುತ್ತಿದ್ದು, ಅದರಲ್ಲಿ ಹಾಲಿವುಡ್ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸುತ್ತಿದ್ದಾರೆ. ಗೀತು ಮೋಹನದಾಸ್ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ ಮತ್ತು ಎಂಟರಟೈನ್‌ಮೆಂಟ್ ಎರಡೂ ಇದೆ ಎಂದು ಯಶ್ ಸಂದರ್ಶನದಲ್ಲಿ ತಿಳಿಸಿದ್ದಾರೆ.