‘ಕೆಜಿಎಫ್’ ನನ್ನ ಬದುಕು ಬದಲಿಸಿತು ಪ್ರಶಾಂತ್ ನೀಲ್‌ಗೆ ಧನ್ಯವಾದ ತಿಳಿಸಿದ ಗರುಡ ರಾಮ್


‘ಕೆಜಿಎಫ್’ ನನ್ನ ಬದುಕು ಬದಲಿಸಿತು ಪ್ರಶಾಂತ್ ನೀಲ್‌ಗೆ ಧನ್ಯವಾದ ತಿಳಿಸಿದ ಗರುಡ ರಾಮ್ ‘ಕೆಜಿಎಫ್’ ಮೂಲಕ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಜನಪ್ರಿಯತೆ ಪಡೆದ ಗರುಡ ರಾಮ್, ತಮ್ಮ ಯಶಸ್ಸಿಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಧನ್ಯವಾದ ತಿಳಿಸಿದ್ದಾರೆ. “ಈ ಸ್ಥಾನಕ್ಕೆ ಬಂದಿದ್ದು ಅವರ ಕಾರಣ. ‘ಕೆಜಿಎಫ್’ ನಂತರ ನನಗೆ ಹಲವಾರು ಅವಕಾಶಗಳು ದೊರಕಿವೆ,” ಎಂದು ಹೇಳಿದ್ದಾರೆ.
ಇದೀಗ, ಗರುಡ ರಾಮ್ ‘ಬಘೀರ’ ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 31ರಂದು ಬಿಡುಗಡೆಯಾಗುವ ‘ಬಘೀರ’ ಸಿನಿಮಾದ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.