ಪರಪ್ಪನ ಅಗ್ರಹಾರದಲ್ಲಿ ವಿಶೇಷ ಕಾರ್ಯಕ್ರಮ – ಆದರೆ ದರ್ಶನ್ ಮತ್ತು ಪ್ರಜ್ವಲ್ ಕಾಣದ ದೃಶ್ಯ ವೈರಲ್!


ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ವರ್ಷವೂ 79ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿಚಾರಣಾಧೀನ ಆರೋಪಿಗಳು ಹಾಗೂ ಶಿಕ್ಷಿತ ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ ಗಮನ ಸೆಳೆದ ಸಂಗತಿ ಏನೆಂದರೆ, ನಟ ದರ್ಶನ್ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ಸಮಾರಂಭಕ್ಕೆ ಹಾಜರಾಗಿಲ್ಲ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಮಾನಸಿಕವಾಗಿ ಕುಗ್ಗಿ ಹೋಗಿರುವ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ದರ್ಶನ್ ಜೊತೆಗೆ ಪವಿತ್ರಾ ಗೌಡ ಕೂಡಾ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ಇನ್ನೊಂದು ಕಡೆ, ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲಲ್ಲಿರುವ ಪ್ರಜ್ವಲ್ ರೇವಣ್ಣ ಕೂಡ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಬಂಧಿಗಳ ನಡುವೆ ನಡೆದ ಈ ಆಚರಣೆಯಲ್ಲಿ ಅವರಿಬ್ಬರ ಗೈರು ಹಾಜರಾತಿ ಜೈಲಿನಲ್ಲೇ ಚರ್ಚೆಗೆ ಕಾರಣವಾಯಿತು.