ಕನ್ನಡದಲ್ಲಿ ಸೋತ ನೇಹಾ ಶೆಟ್ಟಿ – ಪವನ್ ಕಲ್ಯಾಣ್ ‘OG’ ಮೂಲಕ ಅದೃಷ್ಟ ಬಾಗಿಲು ತಟ್ಟಿದ್ರಾ?


ಚಿತ್ರರಂಗದಲ್ಲಿ ಕೆಲ ನಟಿಯರ ಅದೃಷ್ಟ ಒಂದೇ ಚಿತ್ರದಿಂದಲೇ ಬಾಗಿಲು ತೆರೆಯುತ್ತದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಇವರು ಅದರ ಸಜೀವ ಉದಾಹರಣೆ. ಆದರೆ ಕೆಲವರಿಗೆ ಹಾದಿ ಅಷ್ಟು ಸುಲಭವಾಗುವುದಿಲ್ಲ. ಅವರು ಎಷ್ಟೇ ಪರಿಶ್ರಮ ಪಟ್ಟರೂ ದೊಡ್ಡ ಬ್ರೇಕ್ ಸಿಗಲು ವರ್ಷಗಳು ಹಿಡಿಯುತ್ತದೆ. ಈ ಸಾಲಿಗೆ ಸೇರ್ಪಡೆಯಾದವರು ನೇಹಾ ಶೆಟ್ಟಿ. ನೇಹಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆ 02 ಚಿತ್ರದ ಮೂಲಕ ಕಾಲಿಟ್ಟರು. ಆದರೆ ಅದೃಷ್ಟ ಅಷ್ಟಾಗಿ ಜೊತೆಯಾಗಲಿಲ್ಲ. ಈ ಕಾರಣದಿಂದ ಕನ್ನಡದಲ್ಲಿ ಸಿಗಬೇಕಿದ್ದ ದೊಡ್ಡ ಅವಕಾಶಗಳು ಕೈ ತಪ್ಪಿ ಹೋದವು.
ಕನ್ನಡದಲ್ಲಿ ಸಾದ್ಯವಾಗದಿದ್ದರಿಂದ ನೇಹಾ ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲೇ ತಮ್ಮ ಹೆಜ್ಜೆ ಗುರುತು ಮೂಡಿಸಲು ಶುರುಮಾಡಿದರು. ಮೆಹಬೂಬಾ, ರೂಲ್ಸ್ ರಂಜನ್, ಗ್ಯಾಂಗ್ಸ್ ಆಫ್ ಗೋದಾವರಿ, ಗಲ್ಲಿ ರೌಡಿ, ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದರೂ ದೊಡ್ಡ ಮಟ್ಟದ ಯಶಸ್ಸು ದೊರಕಲಿಲ್ಲ. ಆದರೆ 2022ರಲ್ಲಿ ಬಂದ ಡಿಜೆ ಟಿಲ್ಲು ಚಿತ್ರ ಮಾತ್ರ ನೇಹಾಗೆ ಸ್ವಲ್ಪ ಹೆಸರು ತಂದುಕೊಟ್ಟಿತು.
ಸದ್ಯ ನೇಹಾ ಶೆಟ್ಟಿಗೆ ದೊರೆತಿರುವ ಅವಕಾಶ ಅವರ ವೃತ್ತಿಜೀವನದ ಗೇಮ್ ಚೇಂಜರ್ ಆಗಬಹುದು. ಪವನ್ ಕಲ್ಯಾಣ್ ಅಭಿನಯದ ‘OG’ ಚಿತ್ರದಲ್ಲಿ ನೇಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ದೃಢಪಟ್ಟಿದೆ. ಇತ್ತೀಚೆಗೆ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ನೇಹಾ ಸ್ವತಃ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅವರು, “ನನ್ನ ಪಾತ್ರ ಎಲ್ಲರಿಗೂ ಅಚ್ಚರಿ ಕೊಡುತ್ತದೆ. ಅದನ್ನು ತೆರೆಗೆ ಬಂದು ನೋಡಿದರೆ ಮಾತ್ರ ನಿಮಗೆ ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.
ಇದುವರೆಗೂ ನೇಹಾ ಕೇವಲ ‘OG’ ಚಿತ್ರದ ಒಂದು ಹಾಡಿಗೆ ಮಾತ್ರ ಆಯ್ಕೆಯಾಗಿದ್ದಾರೆ ಎಂಬ ಗಾಸಿಪ್ ಇತ್ತು. ಆದರೆ ನೇಹಾ ಹೇಳಿಕೆಯ ನಂತರ ಅವರ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹುಟ್ಟಿದೆ. ‘OG’ ಚಿತ್ರದಲ್ಲಿ ನೇಹಾ ಜೊತೆಗೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಖಳನಾಯಕನಾಗಿ ನಟಿಸಿದ್ದಾರೆ. ಪ್ರಿಯಾಂಕ ಮೋಹನ್, ಅರುಣ್ ದಾಸ್, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.
ಚಿತ್ರ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ. ಆ ದಿನವೇ ನೇಹಾ ಶೆಟ್ಟಿಯ ಪಾತ್ರದ ನಿಜವಾದ ತೂಕ ಮತ್ತು ಅದಕ್ಕೆ ಇರುವ ಪ್ರಾಮುಖ್ಯತೆ ಸ್ಪಷ್ಟವಾಗಲಿದೆ. ಒಮ್ಮೆ ಸೋತರೂ ಹಿಂತಿರುಗದ ಹೋರಾಟ, ಕನ್ನಡದಿಂದ ತೆಲುಗಿಗೆ ಮಾಡಿದ ಪ್ರಯತ್ನ, ಈಗ ಪವನ್ ಕಲ್ಯಾಣ್ ಜೊತೆಗೆ ದೊರೆತಿರುವ ಬಂಪರ್ ಅವಕಾಶ – ಈ ಎಲ್ಲವೂ ಸೇರಿ ನೇಹಾ ಶೆಟ್ಟಿಯ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆ ಹೆಚ್ಚು.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
