ಜಾಮೀನು ನಿರೀಕ್ಷೆಯಲ್ಲಿ ದರ್ಶನ್ ನಟರ ಭೇಟಿ ನಿರಾಕರಣೆ


ಜಾಮೀನು ನಿರೀಕ್ಷೆಯಲ್ಲಿ ದರ್ಶನ್ ನಟರ ಭೇಟಿ ನಿರಾಕರಣೆ ಬೆನ್ನಿನ ತೀವ್ರ ನೋವಿನಿಂದ ಬಳಲುತ್ತಿರುವ ನಟ ದರ್ಶನ್, ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾಮೀನು ನಿರೀಕ್ಷೆಯಲ್ಲಿರುವ ದರ್ಶನ್, ನಟ-ನಟಿಯರ ಭೇಟಿಗೆ ನಿರಾಕರಿಸಿದ್ದು, “ಸ್ವಲ್ಪ ದಿನಗಳಲ್ಲಿ ಜಾಮೀನು ಸಿಗಲಿದೆ, ನಾನು ಹೊರಗೇ ಬರುತ್ತೇನೆ” ಎಂದು ಹೇಳಿದ್ದಾರಂತೆ.
ಅವರ ಪತ್ನಿ ವಿಜಯಲಕ್ಷ್ಮೀ ಅವರು ಪ್ರತಿವಾರ ಜೈಲಿಗೆ ಭೇಟಿ ನೀಡುತ್ತಿದ್ದು, ಜಾಮೀನು ಬಗ್ಗೆ ಧೈರ್ಯ ತುಂಬಿದ್ದಾರೆ. ಇಂದು (ಅ.28) ಹೈಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವೈದ್ಯಕೀಯ ದಾಖಲೆ ಆಧರಿಸಿ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಿದ್ದಾರೆ.