ನಟ ದರ್ಶನ್‌ಗೆ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು


ನಟ ದರ್ಶನ್‌ಗೆ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ನಟ ದರ್ಶನ್ ಅವರಿಗೆ 6 ವಾರಗಳ ಅವಧಿಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ದರ್ಶನ್ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದ್ದು, ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ, ಒಂದು ವಾರದ ಒಳಗೆ ಚಿಕಿತ್ಸೆಯ ವಿವರಗಳನ್ನು ಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ದರ್ಶನ್ ತಮ್ಮ ಪಾಸ್‌ಪೋರ್ಟ್ ಅನ್ನು ಹಸ್ತಾಂತರಿಸಲು ಸೂಚಿಸಲಾಗಿದೆ, ಏಕೆಂದರೆ ಫ್ಲೈಟ್ ರಿಸ್ಕ್ ಇರುವ ಸಾಧ್ಯತೆ ಕುರಿತು ಎಸ್.ಪಿ.ಪಿ ಮನವಿ ಹಿನ್ನಲೆ ಈ ಷರತ್ತು ವಿಧಿಸಲಾಗಿದೆ.
ದರ್ಶನ್ ಪರ ವಕೀಲರಾದ ಸುನೀಲ್ ಅವರು ನ್ಯಾಯಾಧೀಶರು ದರ್ಶನ್ ರ ವೈದ್ಯಕೀಯ ವರದಿಯನ್ನು ಪರಿಶೀಲನೆಗೆ ಕೋರಿದ್ದರು ಎಂದು ತಿಳಿಸಿದ್ದಾರೆ. ಈ ಷರತ್ತುಗಳನ್ನು ಪೂರೈಸಿದ ನಂತರ ಮತ್ತು ಸೆಷನ್ಸ್ ಕೋರ್ಟ್‌ನಿಂದ ಅನುಮೋದನೆ ಬಂದ ಬಳಿಕ ದರ್ಶನ್ ರ ಬಿಡುಗಡೆ ಪ್ರಕ್ರಿಯೆ ಆರಂಭಗೊಳ್ಳಲಿದೆ.