ನಟ ದರ್ಶನ್ಗೆ ಶೀಘ್ರ ಶಸ್ತ್ರಚಿಕಿತ್ಸೆ, ದೀರ್ಘ ವಿಶ್ರಾಂತಿಗೆ ವೈದ್ಯರ ಸೂಚನೆ


ನಟ ದರ್ಶನ್ಗೆ ಶೀಘ್ರ ಶಸ್ತ್ರಚಿಕಿತ್ಸೆ, ದೀರ್ಘ ವಿಶ್ರಾಂತಿಗೆ ವೈದ್ಯರ ಸೂಚನೆ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನ ಸಮಸ್ಯೆಯಿಂದಾಗಿ ಶೀಘ್ರ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ಈಗ ಸರಿಸುಮಾರು 6 ತಿಂಗಳ ಆರೈಕೆ ಅವಧಿಯಲ್ಲಿ ಇದ್ದಾರೆ.
ವೈದ್ಯರ ಪ್ರಕಾರ, ದರ್ಶನ್ ಅವರ ಬೆನ್ನುಹುರಿ ಮತ್ತು ಕಾಲುಗಳಲ್ಲಿ ತೀವ್ರ ನೋವು ಕಂಡುಬಂದಿದ್ದು, ಸರ್ಜರಿ ಮಾಡುವುದು ಅಗತ್ಯವಾಗಿದೆ. ಸರ್ಜರಿ ಬಳಿಕ ದೀರ್ಘ ವಿಶ್ರಾಂತಿ ಅವಶ್ಯವಾಗಿದ್ದು, ದರ್ಶನ್ ಅವರ ಆರೈಕೆಗೆ ಅವರ ಪತ್ನಿ ವಿಜಯಲಕ್ಷ್ಮೀ ಸಹ ಸಮ್ಮತಿ ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆಯ ಬಳಿಕ, ವೈದ್ಯರು ದರ್ಶನ್ ಅವರಿಗೆ ಹೆಚ್ಚಿನ ಆರೈಕೆಯ ಸಲಹೆ ನೀಡುವ ಸಾಧ್ಯತೆ ಇದೆ.