ನಟ ದರ್ಶನ್ಗೆ ದೀಪಾವಳಿ ವಿಶೇಷ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು


ನಟ ದರ್ಶನ್ಗೆ ದೀಪಾವಳಿ ವಿಶೇಷ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ನಟ ದರ್ಶನ್ ಥೂಗುದೀಪ ಅವರಿಗೆ ಕೊನೆಗೂ ದೀಪಾವಳಿಯ ಸಿಹಿ ದೊರೆತಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಕಳೆದ ಐದು ತಿಂಗಳಿಂದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ದರ್ಶನ್ರ ತೀವ್ರ ಬೆನ್ನುನೋವಿನ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಪರಿಗಣಿಸಿ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು ಆರು ವಾರಗಳ ಅವಧಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ದರ್ಶನ್ರ ವಕೀಲರು ನ್ಯಾಯಾಲಯಕ್ಕೆ ವೈದ್ಯರ ವರದಿಯನ್ನು ಸಲ್ಲಿಸಿ, ಚಿಕಿತ್ಸೆ ವಿಳಂಬವಾಗಿದ್ರೆ ಪಾರ್ಶ್ವವಾಯುವಿಗೆ ಈಡಾಗುವ ಅಪಾಯವಿದೆ ಎಂದು ಮನವಿ ಮಾಡಿದ್ದರು. ಈ ಜಾಮೀನು ಮಧ್ಯಂತರವಾಗಿ ಚಿಕಿತ್ಸೆಗಾಗಿ ಮಾತ್ರ ನಿರ್ದಿಷ್ಟವಾಗಿದ್ದು, ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ಒಂದು ವಾರದ ಒಳಗಾಗಿ ಚಿಕಿತ್ಸೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.