ನಟ ದರ್ಶನ್‌ಗೆ ಬಳ್ಳಾರಿ ಜೈಲಿನಿಂದ ಬಿಡುಗಡೆಯ ಸಿಹಿ ಸುದ್ಧಿ ಅಭಿಮಾನಿಗಳಲ್ಲಿ ಸಂಭ್ರಮ


ನಟ ದರ್ಶನ್‌ಗೆ ಬಳ್ಳಾರಿ ಜೈಲಿನಿಂದ ಬಿಡುಗಡೆಯ ಸಿಹಿ ಸುದ್ಧಿ ಅಭಿಮಾನಿಗಳಲ್ಲಿ ಸಂಭ್ರಮ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದ್ದು, ಈ ಸುದ್ದಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲೇ ತಲುಪಿದ ಅಂತದಲ್ಲಿ ಸಂತಸ ಉಂಟುಮಾಡಿದೆ. ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ದರ್ಶನ್, ತಕ್ಷಣ ಜೈಲು ಸಿಬ್ಬಂದಿಯಿಂದ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ 11:30ರ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ಜೈಲಿಗೆ ಬರುವ ನಿರೀಕ್ಷೆಯಿದೆ. ಜಾಮೀನು ಶೂರಿಟಿ ಪೂರ್ಣಗೊಂಡು, ದರ್ಶನ್ ಅವರ ಬಿಡುಗಡೆ ಇಂದು ಸಂಜೆ ದೃಢವಾಗಿದೆ.
ಈ ಬೆನ್ನಲ್ಲೇ ಜೈಲಿನಲ್ಲಿರುವ ಇತರ ಕೈದಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಒತ್ತಾಯಿಸುತ್ತಿದ್ದು, ಜೈಲಾಧಿಕಾರಿಗಳಿಗೆ ತೆಲೆನೋವಾಗಿದೆಯಂತೆ. ಬಳ್ಳಾರಿ ಜೈಲು ಮುಂಭಾಗದಲ್ಲಿ ಅಭಿಮಾನಿಗಳ ದಂಡು ಕೂಡ ಒಟ್ಟುಗೂಡಿದ್ದು, ದರ್ಶನ್ ಗುಣಮುಖರಾಗಲಿ ಎಂಬ ಹಾರೈಕೆಗಳೊಂದಿಗೆ ತಮ್ಮ ನೆಚ್ಚಿನ ನಟನನ್ನು ಬೆಂಬಲಿಸುತ್ತಿದ್ದಾರೆ.