Back to Top

ಸುಪ್ರೀಂಕೋರ್ಟ್ ಆದೇಶಕ್ಕೆ ವಿರೋಧ – “ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ” ಎಂದು ಮನವಿ ಮಾಡಿದ ರಾಜ್ ಬಿ. ಶೆಟ್ಟಿ

SSTV Profile Logo SStv August 13, 2025
ಮೂಕ ಪ್ರಾಣಿಗಳಿಗೆ ಮನೆ ನೀಡಲು ಕರೆಕೊಟ್ಟ ರಾಜ್ ಬಿ. ಶೆಟ್ಟಿ
ಮೂಕ ಪ್ರಾಣಿಗಳಿಗೆ ಮನೆ ನೀಡಲು ಕರೆಕೊಟ್ಟ ರಾಜ್ ಬಿ. ಶೆಟ್ಟಿ

ದೆಹಲಿಯಲ್ಲಿ ನಡೆದ ನಾಯಿ ದಾಳಿ ಪ್ರಕರಣದ ನಂತರ, ಸುಪ್ರೀಂಕೋರ್ಟ್ 8 ವಾರಗಳೊಳಗೆ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿತ್ತು. ಈ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದು, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಾಣಿ ಪ್ರೇಮಿಯಾಗಿರುವ ರಾಜ್, ಶ್ವಾನಗಳೊಂದಿಗೆ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡು, “ಇವು ನನಗೆ ನೆಮ್ಮದಿ ನೀಡುವ ಜೀವಿಗಳು, ಅನೇಕರ ನೋವನ್ನು ಗುಣಪಡಿಸುವ ಶಕ್ತಿ ಇವುಗಳಲ್ಲಿದೆ” ಎಂದು ಹೇಳಿದ್ದಾರೆ. “ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಸುಪ್ರೀಂಕೋರ್ಟ್ ಈ ಆದೇಶವನ್ನು ಬದಲಾಯಿಸಲಿದೆ ಎಂದು ನಾನು ಭಾವಿಸುತ್ತೇನೆ” ಎಂದೂ ಹೇಳಿದ್ದಾರೆ.

“ನಾನು 7 ಬೀದಿ ನಾಯಿಗಳನ್ನು ಸಾಕಿದ್ದೇನೆ. ಸಮಾಜ ಜವಾಬ್ದಾರಿ ತೆಗೆದುಕೊಂಡರೆ ಇಂತಹ ಕಠಿಣ ಕ್ರಮಗಳ ಅಗತ್ಯವಿಲ್ಲ” ಎಂದು ರಾಜ್, ಜನರಿಗೆ ಮೂಕ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದಾರೆ.