ಮಿಲಿಯನ್ ವೀಕ್ಷಣೆ ಹೊಂದಿದ ಮಿಸ್ಟರ್ ರಾಣಿ ಟೀಸರ್ ಹುಡುಗನೇ ಹೀರೋಯಿನ್


ಮಿಲಿಯನ್ ವೀಕ್ಷಣೆ ಹೊಂದಿದ ಮಿಸ್ಟರ್ ರಾಣಿ ಟೀಸರ್ ಹುಡುಗನೇ ಹೀರೋಯಿನ್ ಡಿಫರೆಂಟ್ ಕಥಾಹಂದರದ ‘ಮಿಸ್ಟರ್ ರಾಣಿ’ ಸಿನಿಮಾದ ಟೀಸರ್ ಈಗ ಹವಾ ಸೃಷ್ಟಿಸಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ವಿನೂತನ ಕಥೆ ಹೊಂದಿರುವ ಚಿತ್ರಗಳು ಅಪರೂಪವಾಗಿದ್ದು, ಈ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿದೆ. ದೀಪಕ್ ಸುಬ್ರಹ್ಮಣ್ಯ ಹೀರೋಯಿನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ದೊಡ್ಡ ಸರ್ಪ್ರೈಸ್.
ಮಧುಚಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಕಾಮಿಡಿ ಸಿನಿಮಾ, ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಟೀಸರ್ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದು, ಸುದೃಢ ಪ್ರತಿಕ್ರಿಯೆ ಪಡೆಯುತ್ತಿದೆ.
ಚಿತ್ರದಲ್ಲಿ ಒಂದು ವಿಭಿನ್ನ ಕಥಾಹಂದರವಿದ್ದು, ಹೀರೋ ಆಗುವ ಕನಸು ಹೊತ್ತ ಯುವಕ ಅಕಸ್ಮಾತ್ ಹೀರೋಯಿನ್ ಆಗುವ ಪ್ರಸಂಗ ಚಿತ್ರದಲ್ಲಿ ಇರಲಿದೆ ಎಂದು ಟೀಸರ್ ಹೇಳುತ್ತದೆ. ದೀಪಕ್ ಅವರ ಪಾತ್ರದಲ್ಲಿ ತಂದಿರುವ ಬದಲಾವಣೆ ನೋಡಿ, ಅಭಿಮಾನಿಗಳು ಮತ್ತು ಚಿತ್ರರಂಗದವರು ಶಾಕ್ ಆಗಿದ್ದಾರೆ.
‘ಮಿಸ್ಟರ್ ರಾಣಿ’ ಒಂದು ಹಾಸ್ಯನಟನಕಥೆ ಹೊಂದಿರುವ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ ಎಂದು ಟೀಸರ್ ನೋಡಿದ ಎಲ್ಲರೂ ಹೇಳುತ್ತಿದ್ದಾರೆ.