ಮೆಡಿಕಲ್ ರಿರ್ಪೋಟ್‌ನಲ್ಲಿ ದರ್ಶನ್‌ಗೆ L5 S1ನಲ್ಲಿ ಸಮಸ್ಯೆ ಇರುವುದು ದೃಢ- ನಾಳೆ ಜೈಲಿಗೆ ಪತ್ನಿ ಭೇಟಿ


ಮೆಡಿಕಲ್ ರಿರ್ಪೋಟ್‌ನಲ್ಲಿ ದರ್ಶನ್‌ಗೆ L5 S1ನಲ್ಲಿ ಸಮಸ್ಯೆ ಇರುವುದು ದೃಢ- ನಾಳೆ ಜೈಲಿಗೆ ಪತ್ನಿ ಭೇಟಿ ಕೊಲೆ ಆರೋಪಿ ದರ್ಶನ್ ಅವರ ಮೆಡಿಕಲ್ ಸ್ಕ್ಯಾನಿಂಗ್ ವರದಿ ಹೊರಬಿದ್ದು, L5 S1 ಸಮಸ್ಯೆ ಇರುವುದಾಗಿ ದೃಢಪಟ್ಟಿದೆ. ಬೆನ್ನುನೋವು ತೀವ್ರವಾದ ಕಾರಣ, ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಸಲಹೆ ನೀಡಿದ್ದಾರೆ. ಈ ಕುರಿತು ಚರ್ಚಿಸಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಳೆ (ಅ.25) ಬಳ್ಳಾರಿ ಜೈಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ.
ದರ್ಶನ್ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಜೈಲು ಅಧಿಕಾರಿಗಳು ದರ್ಶನ್ ಆರೋಗ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲು ಪತ್ನಿಯೊಂದಿಗೆ ಚರ್ಚೆ ನಡೆಸಲಿದ್ದಾರೆ.