Back to Top

ಕೃಷ್ಣಂ ಪ್ರಣಯ ಸಖಿ ಯಶಸ್ಸು ಭರ್ಜರಿ ಓಟ ಮುಂದುವರಿಕೆ

SSTV Profile Logo SStv October 22, 2024
ಕೃಷ್ಣಂ ಪ್ರಣಯ ಸಖಿ ಯಶಸ್ಸು
ಕೃಷ್ಣಂ ಪ್ರಣಯ ಸಖಿ ಯಶಸ್ಸು
ಕೃಷ್ಣಂ ಪ್ರಣಯ ಸಖಿ ಯಶಸ್ಸು ಭರ್ಜರಿ ಓಟ ಮುಂದುವರಿಕೆ ಗೋಲ್ಡನ್ ಸ್ಟಾರ್ ಗಣೇಶ್ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ 69ನೇ ದಿನಕ್ಕೆ ಕಾಲಿಟ್ಟಿದೆ. ಈ ಮ್ಯೂಸಿಕಲ್ ರೊಮ್ಯಾಂಟಿಕ್ ಲವ್‌ಸ್ಟೋರಿ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, 25 ಕೋಟಿ ರೂ.ಗೂ ಅಧಿಕ ಗಳಿಸಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಚಿತ್ರ ಪ್ರೇಕ್ಷಕರ ಹೃದಯ ಗೆದ್ದು, 75 ದಿನಗಳನ್ನು ಪೂರೈಸಲು ಸಿದ್ಧವಾಗಿದೆ. 'ದ್ವಾಪರ ದ್ವಾಪರ' ಹಾಡು, ಗಣೇಶ್ ಅವರ ನಟನೆ, ಅರ್ಜುನ್ ಜನ್ಯಾ ಸಂಗೀತದ ಒಗ್ಗರಣೆ, ಮತ್ತು ಶ್ರೀನಿವಾಸ್ ರಾಜು ಅವರ ನಿರ್ದೇಶನ ಚಿತ್ರವನ್ನು ಬೆಸೆಯಿದ್ದು, ಫ್ಯಾಮಿಲಿ ಆಡಿಯನ್ಸ್‌ರಿಂದ ಪ್ರಶಂಸೆಗೆ ಪಾತ್ರವಾಗಿದೆ. ಬಾಕ್ಸ್‌ಆಫೀಸ್‌ನಲ್ಲಿ 'ಯುವ' ಮತ್ತು 'ಭೀಮ' ಅವರನ್ನು ಹಿಂದಿಕ್ಕಿ 'ಕೃಷ್ಣಂ ಪ್ರಣಯ ಸಖಿ' ಯಶಸ್ವಿ ಓಟ ಮುಂದುವರಿಸಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗೂ ಎಂಟ್ರಿ ಕೊಡಲು ಸಿದ್ಧವಾಗಿದೆ.