Back to Top

“ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಒಟ್ಟಾಗಿ ಆಚರಿಸಿದ 79ನೇ ಸ್ವಾತಂತ್ರ್ಯೋತ್ಸವ”

SSTV Profile Logo SStv August 16, 2025
ಕಾನ್ಫಿಡದಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ
ಕಾನ್ಫಿಡದಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

ನಮ್ಮ‌ ಭಾರತ ದೇಶವು ಸ್ವಾತಂತ್ರ್ಯ ಪಡೆದು 78 ವರ್ಷಗಳನ್ನು ಕಳೆದು 79ನೇ ಸಂವತ್ಸರಕ್ಕೆ ಮುಂದಡಿ ಇಡುವ ಈ ಶುಭಸಂದರ್ಭದಲ್ಲಿ ಶ್ರೀಯುತ ಪುಟ್ಟಣ್ಣ ಕಣಗಾಲರು ಲಕ್ಷ್ಮೀನಾರಾಯಣ್, ಸಿದ್ದಲಿಂಗಯ್ಯ, ರಾಜೇಂದ್ರ ಸಿಂಗ್ ಬಾಬು ಮುಂತಾದ ಅಗ್ರಗಣ್ಯ  ಹಿರಿಯ‌ ಚಲನಚಿತ್ರ ನಿರ್ದೇಶಕರು ಕಟ್ಟಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಆಗಸ್ಟ್ 15 2025) ರಂದು ಬೆಳಿಗ್ಗೆ ಗಾಂಧಿನಗರದಲ್ಲಿರುವ ಸಂಘದ ಕಛೇರಿಯ ಮುಂಭಾಗದಲ್ಲಿ 79ನೇ ಸ್ವಾತಂತ್ರೋತ್ಸವನ್ನು ಹಿರಿಯ ಕಲಾವಿದರಾದ ಮತ್ತು ನಿರ್ದೇಶಕರೂ ಆದ ಶ್ರೀಯುತ ರಮೇಶ್ ಭಟ್ ಅವರು ಧ್ವಜಾರೋಹಣ ಮಾಡುವ ಮುಖಾಂತರ ಆಚರಿಸಲಾಯಿತು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅದ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸ್ವಾತಂತ್ರ್ಯೋತ್ಸವದಲ್ಲಿ ಹಿರಿಯ ಕಿರಿಯ ಚಲನಚಿತ್ರ ನಿರ್ದೇಶಕರುಗಳು, ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಣರ, ಕಲಾವಿದರ ಒಕ್ಕೂಟದ ನೂತನ ಅಧ್ಯಕ್ಷರಾದ ಸೋಮಶೇಖರ್ ಮತ್ತು ಪದಾಧಿಕಾರಿಗಳು  ನಿರ್ದೇಶಕರ ಸಂಘದ ಉಪಾಧ್ಯಕ್ಷರಾದ ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ  ಟಾಪ್‌ ಸ್ಟಾರ್ ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಂಘದ ಕಛೇರಿಯಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಣರ, ಕಲಾವಿದರ ಒಕ್ಕೂಟಕ್ಕೆ ನೂತನವಾಗಿ ಆಯ್ಕೆ ಆಗಿರುವ  ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಗೌರವಿಸಸಲಾಯಿತು.