Back to Top

ಜೈಲಿನಿಂದಲೇ ಅಭಿಮಾನಿಗಳ ಮನ ಗೆದ್ದ ದರ್ಶನ್ – “ಕೇವಲ ಮನರಂಜನೆ ದೃಷ್ಟಿಯಿಂದ ಸಿನಿಮಾವನ್ನು ನೋಡಿ”

SSTV Profile Logo SStv August 18, 2025
ಜೈಲಿನಿಂದಲೇ ಭಾವುಕ ಪತ್ರ ಬರೆದ ದರ್ಶನ್
ಜೈಲಿನಿಂದಲೇ ಭಾವುಕ ಪತ್ರ ಬರೆದ ದರ್ಶನ್

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್‌ ತಮ್ಮ ಅಭಿಮಾನಿಗಳಿಗೆ ಮನ ಮುಟ್ಟುವಂತಹ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪತ್ರದಲ್ಲಿ ದರ್ಶನ್‌ ಅವರು ತಮ್ಮ ಅಭಿಮಾನಿಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿ, ಸುಖದಲ್ಲಿ ಪಾಲುಗೊಂಡು, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ಪ್ರೀತಿಗೆ ಜೀವನಪರ್ಯಂತ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.

ಅವರು ತಮ್ಮ ಮೇಲೆ ನಂಬಿಕೆ ಇಟ್ಟು ಕನಸು ಕಂಡ ನಿರ್ದೇಶಕರಿಗೂ, ಕೋಟಿ ಕೋಟಿ ಹಣ ಹೂಡಿರುವ ನಿರ್ಮಾಪಕರಿಗೂ ಬೆಂಬಲವಾಗಿ ನಿಲ್ಲುವುದು ತಮ್ಮ ಆದ್ಯ ಕರ್ತವ್ಯ ಎಂದಿದ್ದಾರೆ. ಹೀಗಾಗಿ, “ದಿ ಡೆವಿಲ್” ಚಿತ್ರದ ಎಲ್ಲಾ ಕಾರ್ಯಗಳು ಯಾವುದೇ ಅಡಚಣೆ ಇಲ್ಲದೆ ಸಾಗಬೇಕೆಂಬುದು ತನ್ನ ಆಶಯ ಎಂದು ತಿಳಿಸಿದ್ದಾರೆ.

ಅಂತೆಯೇ, “ಸಿನಿಮಾ ಒಂದು ಮನರಂಜನೆಯ ಮಾಧ್ಯಮ. ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು” ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ದರ್ಶನ್ ಅವರ ಈ ಪತ್ರ ಅಭಿಮಾನಿಗಳ ಮನಸ್ಸನ್ನು ತಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.