ದರ್ಶನ್ ನೋಡಲು ಜೈಲಿಗೆ ಬಂದ ಧನ್ವೀರ್


ದರ್ಶನ್ ನೋಡಲು ಜೈಲಿಗೆ ಬಂದ ಧನ್ವೀರ್ ಕೊಲೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ನೋಡಲು ಇಂದು (ಅ.25) ಸಂಬಂಧಿ ಸುಶಾಂತ್ ನಾಯ್ಡು ಜೊತೆ ಧನ್ವೀರ್ ಗೌಡ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಬೆನ್ನು ನೋವಿನಿಂದ ನರಳುತ್ತಲೇ ಆಪ್ತರನ್ನು ದರ್ಶನ್ ಭೇಟಿಯಾಗಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರ ಸ್ಕ್ಯಾನಿಂಗ್ ಮೆಡಿಕಲ್ ರಿಪೋರ್ಟ್‌ನಲ್ಲಿ L5 S1 ಸಮಸ್ಯೆ ಇರೋದು ತಿಳಿದು ಬಂದಿದೆ. ಈ ಹಿನ್ನೆಲೆ ದರ್ಶನ್ ನೋಡಲು ಸಂಬಂಧಿ ಸುಶಾಂತ್ ನಾಯ್ಡು, ನಟ ಧನ್ವೀರ್ ಗೌಡ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಬಳಿಕ ಆರೋಗ್ಯದ ಕುರಿತು, ಮುಂದಿನ ಕಾನೂನು ಸಮರದ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಕುಟುಂಬಸ್ಥರು ತಂದಿರೋ 2 ಬ್ಯಾಗ್‌ಗಳನ್ನು ಹಿಡಿದು ಹೋಗಲಾರದೇ ನಟ ನರಳಾಡಿದ್ದಾರೆ.ಅಂದಹಾಎ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಆರೋಪಿ ದರ್ಶನ್‌ರನ್ನು ಜೂನ್ 11ರಂದು ಬಂಧಿಸಿದ್ದು, ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.