'ಹತ್ತಿದ್ದ ಏಣಿನ ಮರಿಬ್ಯಾಡ..'; ಜಗ್ಗೇಶ್ ಬದುಕಿನ ಭಾಗವಾದ ಶ್ರೀರಾಮಪುರ 'ರಸ್ತೆ'


ನವರಸ ನಾಯಕ ಜಗ್ಗೇಶ್ ಅವರು ಕೇವಲ ನಟನಲ್ಲ, ಅವರು ಒಂದು ಸಂವೇದನೆ. ಅವರು ಬರೆದ ಪ್ರತಿಯೊಂದು ಸಾಲುಗಳಲ್ಲಿ ಬದುಕಿನ ಒತ್ತಾಸೆಗಳ ದನಿ, ಕನಸುಗಳ ಸಾಗರ, ಎಲ್ಲವೂ ಜೀವಂತವಾಗುತ್ತವೆ. ಇತ್ತೀಚೆಗೆ ಅವರ ಫೇಸ್‌ಬುಕ್‌ನಲ್ಲಿ ಮಾಡಿದ ಒಂದು ಭಾವುಕ ಪೋಸ್ಟ್ ಕನ್ನಡಿಗರ ಮನಕೆದ್ದಿದೆ ಅದು ಶ್ರೀರಾಮಪುರದ ಒಂದು ‘ರಸ್ತೆ’ ಬಗ್ಗೆ!
ಈ ರಸ್ತೆಯ ಮೇಲೆ ಜಗ್ಗೇಶ್ ಅಂಬೆಗಾಲಿಟ್ಟದ್ದು, ಬಡತನ ಕಂಡದ್ದು, ಗೆಳೆತನ ಬೆಳೆಸಿದ್ದು, ಪ್ರೇಮದಲ್ಲಿ ಬೀಳಿದ್ದು, ಹಸಿವಿನ ಗಂಟು ಅನುಭವಿಸಿದ್ದು, ನ್ಯಾಯಾಲಯ ಮೆಟ್ಟಿಲೇರಿ ಮದುವೆಗೂ ನಿಂತದ್ದು ಎಲ್ಲವೂ ಇಲ್ಲಿಂದ ಪ್ರಾರಂಭವಾಯಿತು. ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಎಲ್ಲ ಹಂತಗಳು ಕವಿತೆಯ ರೂಪದಲ್ಲಿ ಹೊರಬರುತ್ತದೆ:
ಓ ಮೆಚ್ಚಿನ ಶ್ರೀರಾಮಪುರ ರಸ್ತೆ
ಅಪ್ಪ ಅಮ್ಮನ ಕೈ ಹಿಡಿದು ಅಂಬೆಗಾಲಿಟ್ಟ ರಸ್ತೆ
ಆ ದಿನಗಳು ಕುಖ್ಯಾತಿಯ ರಸ್ತೆ
ಆಟೋ ಕೂಡ ಬರದಿದ್ದ ರಸ್ತೆ
ಛಲ ಹುಟ್ಟಿಸಿದ ರಸ್ತೆ
ಸ್ನೇಹಿತರ ಒಟ್ಟಿಗೆ ಹೆಜ್ಜೆ ಹಾಕಿದ ಇಷ್ಟದ ರಸ್ತೆ
ಅನೇಕ ಸ್ನೇಹಿತರ ಅಂತ್ಯ ಮೆರವಣಿಗೆ ರಸ್ತೆ
ಅಣ್ಣಮ್ಮನ ಮುಂದೆ ಕುಣಿದ ರಸ್ತೆ
ಮಡದಿಯ ಆಕರ್ಷಿಸಿದ ರಸ್ತೆ
ಕೋರ್ಟು ಮೆಟ್ಟಲೇರಿ ಅವಳ ಪಡೆದ ರಸ್ತೆ
ಚೊಚ್ಚಲ ಸಂಸಾರ ನಡೆಸಿದ ರಸ್ತೆ
ಸೀಮೆ ಎಣ್ಣೆಗೆ ಸರದಿಯಲ್ಲಿ ನಿಂತ ರಸ್ತೆ
ಮಗ ಹುಟ್ಟಿದಾಗ ಸಂಭ್ರಮಿಸಿದ ರಸ್ತೆ
ನಟನಾಗಲು ಸವಾರಿ ಹೊರಟ ರಸ್ತೆ
ನಟನಾಗಿ ಜೀವನ ಗೆದ್ದಮೇಲು ನನ್ನಿಷ್ಟದ ರಸ್ತೆ
ಇಂದಿಗೂ ಬೇಜಾರು ಆವರಿಸಿದರೆ ನಿವಾರಿಸುವ ರಸ್ತೆ
ಇಷ್ಟವಾದ ರಸ್ತೆ ಆದರೆ ಅನೇಕರು ನನ್ನ ಬಿಟ್ಟು ಹೋದ ರಸ್ತೆ
ಉಳಿದವರ ಈಗಲು ಹುಡುಕಿಹೋಗುವ ರಸ್ತೆ
ಶ್ರೀರಾಮಪುರ, ಬೆಂಗಳೂರು- 21ಇದು ಬೆಂಗಳೂರಿನ ಶ್ರೀರಾಮಪುರದ ರಸ್ತೆ ಬಗ್ಗೆ ಜಗ್ಗೇಶ್ ಬರೆದಿರುವ ಒಂದು ಬ್ಯೂಟಿಫುಲ್ ಬರಹ. ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟನ್ನು ಲೈಕ್ ಮಾಡಿದ್ದಾರೆ."ಕಷ್ಟ ಹಸಿವು ನೋವು ಪಡೆದವರನ್ನ ಯಾರು ಸೋಲಿಸಲಾರರು ನೀವು ಬದುಕನ್ನ ಗೆದ್ದವರು ಸರ್..", "ಯಾರೋ ಸಾಹಿತಿ ಬರೆದಂತೆ ಇದೆ ಇದು... ಇಂತಹ ಎಷ್ಟೋ ಹಿಸ್ಟರಿ ನಿಮಗೆ ಇದೆ ಅಂತ ಗೊತ್ತಿರಲಿಲ್ಲ.. ಹಳೆಯ ಸುಂದರ ಅನುಭವ ಆದ ಕ್ಷಣಗಳು.. ಅವಿಸ್ಮರಣೀಯ ಕ್ಷಣಗಳು ಸರ್..", "ಇಷ್ಟು ಎತ್ತರಕ್ಕೆ ಬೆಳದರೂ ಹಳೆಯ ದಿನಗಳ ಮರೆಯದೇ ನೆನಪಿಸುವ ನಿಮ್ಮ ಗುಣ ಅದ್ಭುತ.. ಲವ್ ಯು ಅಣ್ಣ.." ಎದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.