Back to Top

ಹಂಸಾ ವಿರುದ್ಧ ಸಿಟ್ಟಾದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಕಿರಿಕ್

SSTV Profile Logo SStv October 24, 2024
ಹಂಸಾ ವಿರುದ್ಧ ಸಿಟ್ಟಾದ ಗೋಲ್ಡ್ ಸುರೇಶ್
ಹಂಸಾ ವಿರುದ್ಧ ಸಿಟ್ಟಾದ ಗೋಲ್ಡ್ ಸುರೇಶ್
ಹಂಸಾ ವಿರುದ್ಧ ಸಿಟ್ಟಾದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ 'ಬಿಗ್ ಬಾಸ್ ಕನ್ನಡ ಸೀಸನ್ 11' ನಲ್ಲಿ ಜಗದೀಶ್ ಮನೆಯಿಂದ ಹೊರಹೋಗುತ್ತಿದ್ದಂತೆ, ಅವರ ಸ್ನೇಹಿತ ಗೋಲ್ಡ್ ಸುರೇಶ್ ಮತ್ತು ಹಂಸಾ ನಡುವೆ ಕಿರಿಕ್ ಉಂಟಾಗಿದೆ. ಸದ್ಯ, ಸುರೇಶ್ ಹಂಸಾ ಜೊತೆ ಕೆಲಸ ಮಾಡಲು ನಿರಾಕರಿಸಿದ್ದು, "ಹಂಸಾ ಇದ್ದಲ್ಲಿ ನಾನಿರಲ್ಲ" ಎಂದು ಸಿಟ್ಟಿನಿಂದ ಹೇಳಿದ್ದಾರೆ. ಕ್ಯಾಪ್ಟನ್ ಐಶ್ವರ್ಯಾ, ಕಿಚನ್ ಕ್ಲೀನಿಂಗ್​ಗೆ ಹಂಸಾ ಮತ್ತು ಸುರೇಶ್ ಅವರನ್ನು ನೇಮಿಸಿದರೂ, ಸುರೇಶ್ ಈ ಆಯ್ಕೆಯನ್ನು ಒಪ್ಪಲಿಲ್ಲ. ಈ ಸನ್ನಿವೇಶ ಹಂಸಾ ಮತ್ತು ಸುರೇಶ್ ನಡುವಿನ ಅಸಮಾಧಾನವನ್ನು ಇನ್ನಷ್ಟು ಗಟ್ಟಿಯಾಗಿಸಿದೆ. ಜಗದೀಶ್ ಇದ್ದಿದ್ದರೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಬಿಗ್ ಬಾಸ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.