ಡಾಲಿ ಚಿತ್ರಕ್ಕೆ ಕಾಂತಾರ ಬೆಡಗಿ ನಾಯಕಿ ಹಲಗಲಿ ಟೀಮ್ ಸೇರಿಕೊಂಡ ಸಪ್ತಮಿ


ಡಾಲಿ ಚಿತ್ರಕ್ಕೆ ಕಾಂತಾರ ಬೆಡಗಿ ನಾಯಕಿ ಹಲಗಲಿ ಟೀಮ್ ಸೇರಿಕೊಂಡ ಸಪ್ತಮಿ ಕನ್ನಡದ ಐತಿಹಾಸಿಕ ಸಿನಿಮಾದಲ್ಲಿ ಮತ್ತೊಂದು ಅದ್ಧೂರಿ ಚಿತ್ರ ಮೂಡಿ ಬರುತ್ತಿದ್ದು, "ಹಲಗಲಿ" ಎಂಬ ಹೆಸರಿನ ಈ ಚಿತ್ರಕ್ಕೆ ಈಗ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾಲಿ ಧನಂಜಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ಸುಕೇಶ್ ಡಿ ಕೆ ನಿರ್ದೇಶಿಸುತ್ತಿದ್ದು, ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಅವರು ನಿರ್ಮಿಸುತ್ತಿದ್ದಾರೆ.
ಹಲಗಲಿ ಚಿತ್ರ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡ ನಾಡಿನ ವೀರರ ಬಗ್ಗೆ ಕಥೆ ಹೇಳುತ್ತಿದ್ದು, 5 ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕನ್ನಡದ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಂ ಮೊರ್ ಈ ಚಿತ್ರದಲ್ಲಿಯೂ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಚಿತ್ರ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮಹತ್ತರ ಸಾಧನೆಯಾಗಲಿದ್ದು, ವಾರಿಯರ್ ಪಾತ್ರದಲ್ಲಿ ಅವರನ್ನು ಕಾಣಲು ಪ್ರೇಕ್ಷಕರು ತೀವ್ರವಾಗಿ ನಿರೀಕ್ಷಿಸುತ್ತಿದ್ದಾರೆ.