ಬಿಗ್ ಬಾಸ್ ಟಾಸ್ಕ್ ವೇಳೆ ಗಾಯಗೊಂಡ ಗೋಲ್ಡ್ ಸುರೇಶ್, ಆಸ್ಪತ್ರೆಗೆ ದಾಖಲು


ಬಿಗ್ ಬಾಸ್ ಟಾಸ್ಕ್ ವೇಳೆ ಗಾಯಗೊಂಡ ಗೋಲ್ಡ್ ಸುರೇಶ್, ಆಸ್ಪತ್ರೆಗೆ ದಾಖಲು ಬಿಗ್ ಬಾಸ್ ಕನ್ನಡ ಮನೆಯಲ್ಲಿ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಅವರು ಗಂಭೀರ ಗಾಯಕ್ಕೀಡಾದರು. ನೀರು ತುಂಬಿದ ಡ್ರಮ್ ತಪ್ಪಾಗಿ ಅವರ ಕಾಲಿಗೆ ಬಿದ್ದು, ತೀವ್ರ ನೋವಿನಿಂದ ಕಿರುಚಿದರು. "ಕಾಲು ಮುರಿದೇ ಹೋಯ್ತು" ಎಂದು ಹೇಳಿ ಅವರು ನೋವಿನಿಂದ ನರಳಿದ್ದು, ಇಡೀ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿತು.
ತಕ್ಷಣವೇ ಸುರೇಶ್ ಅವರನ್ನು ಕನ್‌ಫೆಷನ್ ರೂಂಗೆ ಕರೆದುಕೊಂಡು ಹೋಗಿ, ಅಲ್ಲಿಂದ ಆಸ್ಪತ್ರೆಗೆ ಕಳುಹಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಗ್ ಬಾಸ್ ತಂಡದಿಂದ ಮನೆಯವರಿಗೆ "ಗಂಭೀರ ಗಾಯಗಳಿಲ್ಲ" ಎಂಬ ಮಾಹಿತಿಯನ್ನು ನೀಡಿದ್ದು, ಎಲ್ಲರಿಗೂ ನಿರಾಳತೆ ನೀಡಿದೆ.