Back to Top

‘ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’ ಗೆಳೆಯನಿಗೆ ಜಗ್ಗೇಶ್ ಭಾವುಕ ನಮನ

SSTV Profile Logo SStv October 29, 2024
ಗೆಳೆಯನಿಗೆ ಜಗ್ಗೇಶ್ ಭಾವುಕ ನಮನ
ಗೆಳೆಯನಿಗೆ ಜಗ್ಗೇಶ್ ಭಾವುಕ ನಮನ
‘ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’ ಗೆಳೆಯನಿಗೆ ಜಗ್ಗೇಶ್ ಭಾವುಕ ನಮನ ನಮಗೆಲ್ಲಾ ನೆನಪಾಗುವ ಬಗೆಗೆ, ನಟ ಜಗ್ಗೇಶ್ ಅವರು ತಮ್ಮ ಆಪ್ತ ಸ್ನೇಹಿತ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದಿಂದ ಆರಂಭಿಸಿ ಪುನೀತ್ ಅವರ ನಿಧನದವರೆಗೆ ಅವರ ಜೀವನದ ಎಲ್ಲ ಹಂತಗಳಲ್ಲಿ ಸಾಥ್ ನೀಡಿದ ಜಗ್ಗೇಶ್, ಅಪ್ಪು ಅವರ ನೆನಪಿನಲ್ಲಿ ಪದ್ಯವೊಂದು ಬರೆದಿದ್ದಾರೆ. ಜಗ್ಗೇಶ್ ಅವರ ಭಾವನೆಗಳು: “ನೀ ಮಗುವಾಗಿದ್ದಾಗ ಅಪ್ಪನ ಮಡಿಲಲ್ಲಿ ಕಂಡಿದ್ದೆ.. ಅಪ್ಪನ ಭುಜದವರೆಗೆ ಬೆಳೆದಾಗ ಅಪ್ಪನ ಪಕ್ಕದಲ್ಲಿ ಕಂಡಿದ್ದೆ.. ಮದುವೆಯಾದಾಗ ಮಡದಿಯ ಪಕ್ಕದಲ್ಲಿ ಕಂಡಿದ್ದೆ.. ನಟನಾಗಿ ಬೆಳದಾಗ ಅಭಿಮಾನಿಗಳ ಹೃದಯದಲ್ಲಿ ಕಂಡಿದ್ದೆ.. ಗೆಳೆಯನಾದಾಗ ನಿನ್ನ ನಗುವನ್ನು ಕಂಡಿದ್ದೆ.. ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ..” ಈ ಭಾವುಕ ಸಾಲುಗಳು ಪುನೀತ್ ಅವರ ಮೇಲಿನ ಅಭಿಮಾನಿಗಳ ಪ್ರೀತಿ, ಪುನೀತ್ ಅವರ ನಿಸ್ವಾರ್ಥ, ಸ್ನೇಹಭಾವ ಮತ್ತು ವಿಶೇಷ ವ್ಯಕ್ತಿತ್ವವನ್ನು ಸ್ಮರಿಸುತ್ತವೆ. ಈ ಪದ್ಯವನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದು, “ಅಪ್ಪುವಿಗೆ ಅಪ್ಪುನೇ ಸಾಟಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.