Back to Top

ರಾಮನಗರದಲ್ಲಿ "ಅಪರಿಚಿತೆ" ಶೂಟಿಂಗ್ ಜೋರಾಗಿ – ಗೀತಪ್ರಿಯ ಮತ್ತು ಸಿಂಧೂ ಲೋಕನಾಥ್ ಒಂದೇ ಸೆಟ್‌ನಲ್ಲಿ!

SSTV Profile Logo SStv August 18, 2025
"ತಾಯವ್ವ" ಖ್ಯಾತಿಯ ಗೀತಪ್ರಿಯ, ಸಿಂಧೂ ಲೋಕನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿ
"ತಾಯವ್ವ" ಖ್ಯಾತಿಯ ಗೀತಪ್ರಿಯ, ಸಿಂಧೂ ಲೋಕನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿ

ಈ ಮೊದಲು 'ತಾಯವ್ವ' ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ "ಅಪರಿಚಿತೆ" ಚಿತ್ರದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವನಾಥ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಶಾಸಕ ಅಶ್ವಥ್ ನಾರಾಯಣ್ ಅನಾವರಣ ಮಾಡಿ ಚಿತ್ರಕ್ಕೆ ಚಾಲನೆ ನೀಡಿದ್ದರು.

ಪ್ರಸ್ತುತ ಚಿತ್ರಕ್ಕೆ ರಾಮನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಗೀತಪ್ರಿಯ, ಸಿಂಧೂ ಲೋಕನಾಥ್ ಸೇರಿದಂತೆ ಅನೇಕ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ನೈಜಘಟನೆ ಆಧಾರಿತ ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ.‌ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ‌ ಸಹ ಹೊಂದಿದೆ ಎಂದು ನಟಿ ಗೀತಪ್ರಿಯ ತಿಳಿಸಿದ್ದಾರೆ.  

ಗೀತಪ್ರಿಯ ಅವರ ಪತಿ ಸುರೇಶ್ ಕುಮಾರ್ ಅವರು ಅಮರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಗೀತಪ್ರಿಯ, ಹಿರಿಯ ನಟ ಶ್ರೀನಾಥ್, ರೋಹಿತ್(ಶ್ರೀನಾಥ್ ಅವರ ಪುತ್ರ), ಸಿಂಧೂ ಲೋಕನಾಥ್, ಆರ್.ಜೆ ನಿಖಿತಾ ಮುಂತಾದವರಿದ್ದಾರೆ.