Back to Top

ಗೌಪ್ಯತೆ ಒಳಗೊಂಡ ದರ್ಶನ್ ಚಿಕಿತ್ಸೆ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ

SSTV Profile Logo SStv November 6, 2024
ಗೌಪ್ಯತೆ ಒಳಗೊಂಡ ದರ್ಶನ್ ಚಿಕಿತ್ಸೆ
ಗೌಪ್ಯತೆ ಒಳಗೊಂಡ ದರ್ಶನ್ ಚಿಕಿತ್ಸೆ
ಗೌಪ್ಯತೆ ಒಳಗೊಂಡ ದರ್ಶನ್ ಚಿಕಿತ್ಸೆ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈಕೋರ್ಟ್ ನೀಡಿರುವ ಷರತ್ತುಬದ್ಧ ಜಾಮೀನಿನ ಆಧಾರದ ಮೇಲೆ ದರ್ಶನ್‌ ಚಿಕಿತ್ಸೆಗೊಳ್ಳುತ್ತಿದ್ದು, ಅವರ ಆರೋಗ್ಯದ ಮಾಹಿತಿಯನ್ನು ರಹಸ್ಯವಾಗಿಡಲಾಗಿದೆ. ದರ್ಶನ್ ಅವರ ಚಿಕಿತ್ಸೆಯ ವಿವರಗಳನ್ನು ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಇಂದು (ನವೆಂಬರ್ 6) ಸಲ್ಲಿಸಲಾಗಿದೆ. ಅವರ ಪತ್ನಿ ವಿಜಯಲಕ್ಷ್ಮಿ ಸೂಚನೆಯ ಮೇರೆಗೆ ಆಸ್ಪತ್ರೆ ಕೂಡಾ ಯಾವುದೇ ವಿವರಗಳನ್ನು ಬಹಿರಂಗಪಡಿಸದೆ ಗೌಪ್ಯತೆ ಕಾಪಾಡುತ್ತಿದೆ. ದರ್ಶನ್ ಅವರಿಗೆ ಶೀಘ್ರ ಶಸ್ತ್ರಚಿಕಿತ್ಸೆ ನಡೆಸಲು ಕುಟುಂಬದವರು ಸಮ್ಮತಿ ನೀಡಿದ್ದು, ಸರ್ಜರಿ ಬಳಿಕ ದೀರ್ಘ ಕಾಲದ ವಿಶ್ರಾಂತಿ ಅಗತ್ಯವಿರಬಹುದು ಎಂದು ಹೇಳಲಾಗಿದೆ. ದರ್ಶನ್ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಾತರದಿಂದ ಕಾಯುತ್ತಿದ್ದರೂ, ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.