Back to Top

"ಸೈಬರ್ ಜಾಲದಲ್ಲಿ ರಮ್ಯಾ ಕಿರುಕುಳ ಪ್ರಕರಣ: ಗಂಗಾವತಿಯ ಮಂಜುನಾಥ ವಶಕ್ಕೆ!"

SSTV Profile Logo SStv August 7, 2025
ಗಂಗಾವತಿಯ ಮಂಜುನಾಥ ವಶಕ್ಕೆ
ಗಂಗಾವತಿಯ ಮಂಜುನಾಥ ವಶಕ್ಕೆ

ಸ್ಯಾಂಡಲ್‌ವುಡ್ ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ಕೊಪ್ಪಳದ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದ ಮಂಜುನಾಥ ಎಂಬ ಯುವಕನನ್ನು ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟಿ ರಮ್ಯಾ ಅವರು ಕುಟುಂಬದ ಪರ ನಿಂತಿದ್ದರು. ಈ ಹಿನ್ನೆಲೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ರಮ್ಯಾಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಿದ್ದರು. ರಮ್ಯಾ ಅವರು 43 ಖಾತೆಧಾರಕರ ವಿರುದ್ಧ ದೂರು ನೀಡಿದ ಬಳಿಕ, ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿದ್ದರು.

ಇದಕ್ಕೂ ಮೊದಲು ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಎಂಬ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮಂಜುನಾಥನ ಬಂಧನದೊಂದಿಗೆ ಪ್ರಕರಣಕ್ಕೆ ಮತ್ತಷ್ಟು ಬೆಳಕು ಬೀಳುತ್ತಿದೆ. ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.