ಮತ್ತೆ ಒಂದಾಗುತ್ತಿರುವ ‘ಪಾಪ್ಕಾರ್ನ್’ ಜೋಡಿ ಡಾಲಿ ಜೊತೆ ಸಪ್ತಮಿ


ಮತ್ತೆ ಒಂದಾಗುತ್ತಿರುವ ‘ಪಾಪ್ಕಾರ್ನ್’ ಜೋಡಿ ಡಾಲಿ ಜೊತೆ ಸಪ್ತಮಿ ಡಾಲಿ ಧನಂಜಯ್ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಸಪ್ತಮಿ ಗೌಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಇದೀಗ ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ ನಟಿಸಲಿದ್ದಾರೆ.
ದುನಿಯಾ ಸೂರಿ ನಿರ್ದೇಶಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ 2020 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದ್ದು ಮಾತ್ರವೇ ಅಲ್ಲದೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ನಟಿಯೊಬ್ಬರ ಪರಿಚಯವಾಗಿತ್ತು, ಅವರೇ ಸಪ್ತಮಿ ಗೌಡ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸಪ್ತಮಿ ಗೌಡ, ಡಾಲಿ ಧನಂಜಯ್ರ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ಬಲು ಘಾಟಿ, ಸಿಟ್ಟಿನ ಹೆಂಗಸಿನ ಪಾತ್ರವದು. ಸಿನಿಮಾದಲ್ಲಿ ಅವರು ಡಾಲಿಗೆ ಬೈದ ಬೈಗುಳಗಳು ಭಾರಿ ಹಿಟ್ ಆಗಿತ್ತು. ಆ ಪಾತ್ರದ ಮೂಲಕವೇ ಸಪ್ತಮಿ ಮೊದಲಿಗೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾಗಿದ್ದರು.
‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಬಳಿಕ ಡಾಲಿ ಧನಂಜಯ್ ಹಾಗೂ ಸಪ್ತಮಿ ಗೌಡ ಒಟ್ಟಿಗೆ ನಟಿಸಿರಲಿಲ್ಲ. ಆದರೆ ಈಗ ಸುಮಾರು ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಒಂದಾಗುತ್ತಿದ್ದಾರೆ. ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾದ ಕತೆ, ಪಾತ್ರವರ್ಗ ಅಂತಿಮವಾಗಿದ್ದು ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗಿದೆ.