ಡಿಕೆ ಮನೆಯಲ್ಲಿ ಧ್ರುವ ಸರ್ಜಾ.. ಮೀಟಿಂಗ್ ಹಿಂದೆ ಏನು ಸೀಕ್ರೆಟ್?


ಸ್ಯಾಂಡಲ್‌ವುಡ್ ಮಾಸ್ ಹೀರೋ ಧ್ರುವ ಸರ್ಜಾ ಇತ್ತೀಚೆಗೆ ಸದಾಶಿವನಗರದಲ್ಲಿರುವ ಸಂಸದೆ ಡಿಕೆ ಸುರೇಶ್ ಅವರ ಮನೆಗೆ ಭೇಟಿ ನೀಡಿದ್ದರು. ಮೊದಲ ನೋಟಕ್ಕೆ ಇದು ಕೇವಲ ಕ್ಯಾಶುವಲ್ ಮೀಟಿಂಗ್ ಅನ್ನಿಸಿದ್ರೂ, ಇದರ ಹಿಂದೆ ಭೂಮಿ ಸಂಬಂಧಿತ ಸೀರಿಯಸ್ ವಿಚಾರವಿದೆ ಎನ್ನಲಾಗುತ್ತಿದೆ.
ಧ್ರುವ ಸರ್ಜಾ ಕನಕಪುರದ ಬಳಿ ಸುಮಾರು 7-8 ಎಕರೆ ಫಾರ್ಮ್ ಹೌಸ್ ಖರೀದಿಸಿದ್ದು, ಅಲ್ಲಿ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಸ್ಮಾರಕವನ್ನೂ ನಿರ್ಮಿಸಿದ್ದಾರೆ. ಆದರೆ ಆ ಜಮೀನು ಡಿ-ನೋಟಿಫೈ ಆಗದ ಕಾರಣ ಇದೀಗ ಕನಕಪುರ ಏರ್‌ಪೋರ್ಟ್ ಯೋಜನೆಗೆ ಭೂಮಿ ಸ್ವಾಧೀನದ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ತಮ್ಮ ಭೂಮಿ ಕಾಪಾಡಿಕೊಳ್ಳಲು ಡಿಕೆ ಬ್ರದರ್ಸ್ ಸಹಾಯಕ್ಕಾಗಿ ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಸಿನಿಮಾ, ಫ್ಯಾಮಿಲಿ, ಫ್ಯಾನ್ಸ್, ಪ್ರಾಪರ್ಟಿ ವಿಚಾರ – ಎಲ್ಲವನ್ನೂ ಒಂದೇ ವೇಳೆ ಬ್ಯಾಲೆನ್ಸ್ ಮಾಡುತ್ತಿರುವ ಧ್ರುವ ಸರ್ಜಾ ಮುಂದಿನ ದಿನಗಳಲ್ಲಿ ಈ ಭೂಮಿ ವಿವಾದ ಹೇಗೆ ತಿರುಗುತ್ತದೆ ಅನ್ನೋದು ಕುತೂಹಲದ ವಿಷಯವಾಗಿದೆ. ಚಿರಂಜೀವಿ ಸರ್ಜಾ ಸ್ಮಾರಕ ಇರುವ ಈ ಪುಣ್ಯಭೂಮಿ ಸರ್ಕಾರ ಸ್ವಾಧೀನ ಮಾಡಿದರೆ ಏನಾಗುತ್ತದೆ? ಅನ್ನೋ ಪ್ರಶ್ನೆ ಈಗ ಧ್ರುವ ಅಭಿಮಾನಿಗಳ ಮನಸ್ಸು ಕಾಡುತ್ತಿದೆ.