ಜಗ್ಗುದಾದಾ ಡೈರೆಕ್ಟರ್ vs ಧ್ರುವ ಸರ್ಜಾ – ಪ್ಯಾನ್ ಇಂಡಿಯಾ ಸಿನಿಮಾ ವಿವಾದ ತೀವ್ರ!


ವಿವಾದ ಇದೀಗ ಚರ್ಚೆಗೆ ಕಾರಣವಾಗಿದೆ. ಎಂಟು ವರ್ಷಗಳ ಹಿಂದೆ ಸೈನ್ ಮಾಡಿದ ಒಪ್ಪಂದದ ಪ್ರಕಾರ ಸಿನಿಮಾ ಇಂದಿಗೂ ಪ್ರಾರಂಭವಾಗದೆ ಇರುವುದರಿಂದ, ಧ್ರುವ ಸರ್ಜಾ ವಿರುದ್ಧ ವಂಚನೆ ಪ್ರಕರಣ ಮುಂಬೈನ ಆಂಬೋಳಿ ಠಾಣೆಯಲ್ಲಿ ದಾಖಲಾಗಿದೆ.
ಈ ಬಗ್ಗೆ ಧ್ರುವ ಸರ್ಜಾ ಬಳಗದಿಂದ, ರಾಘವೇಂದ್ರ ಹೆಗಡೆ ಕನ್ನಡಕ್ಕೆ ಆದ್ಯತೆ ನೀಡದೇ ತಮಿಳು-ತೆಲುಗು ಸಿನಿಮಾಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ರಾಘವೇಂದ್ರ ಹೆಗಡೆ, “ನಾನು ಜಗ್ಗುದಾದಾ ಸಿನಿಮಾ, ಶನಿ, ಮಹಾಕಾಳಿ ಸೀರಿಯಲ್‌ಗಳನ್ನು ಕನ್ನಡದಲ್ಲೇ ಮಾಡಿದ್ದೇನೆ. ಎರಡನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕೆಂದಿದ್ದೆ. ಅವರು ಪ್ಯಾನ್ ಇಂಡಿಯಾ ಮಾಡಲು ಬಯಸಿದ್ದರಿಂದ 8 ವರ್ಷ ಕಾದೆ. ಹಣ ವಾಪಸ್ ಕೇಳಿದಾಗ ನೋಟಿಸ್ ಕಳಿಸಿದ್ದೇನೆ” ಎಂದಿದ್ದಾರೆ.
ತಮಿಳು ಅಥವಾ ತೆಲುಗು ಸಿನಿಮಾ ಮಾಡುವ ಉದ್ದೇಶವಿದ್ದರೆ ಆ ಭಾಷೆಯ ನಟರೊಂದಿಗೆ ಕೆಲಸ ಮಾಡುತ್ತಿದ್ದೆನೆಂದು ಅವರು ಸ್ಪಷ್ಟಪಡಿಸಿ, “ನಾನು ಕರಾವಳಿಯವನು, ನನ್ನ ಮಾತೃಭಾಷೆ ಕನ್ನಡ” ಎಂದು ತಿರುಗೇಟು ನೀಡಿದ್ದಾರೆ.