ಬಿಗ್ ಬಾಸ್ ಕನ್ನಡ 11 ಧನರಾಜ್ ಎಲಿಮಿನೇಟ್ ಆಗೋದು ಪಕ್ಕಾ


ಬಿಗ್ ಬಾಸ್ ಕನ್ನಡ 11 ಧನರಾಜ್ ಎಲಿಮಿನೇಟ್ ಆಗೋದು ಪಕ್ಕಾ ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರನೇ ವಾರದಲ್ಲಿ ಧನರಾಜ್ ನಾಮಿನೇಷನ್ ಪಟ್ಟಿಯಲ್ಲಿ ಇದ್ದು, ಅವರ ಎಲಿಮಿನೇಷನ್ ಕುರಿತು ಅಭಿಮಾನಿಗಳಲ್ಲಿ ಚರ್ಚೆಗಳು ಜೋರಾಗಿದೆ. ಈ ಬಾರಿ ಕ್ಯಾಪ್ಟನ್ ಹನುಮಂತ ಅವರಿಗೆ ನಾಮಿನೇಷನ್ ಆಯ್ಕೆ ಅಧಿಕಾರ ಸಿಕ್ಕಾಗ, ಮೋಕ್ಷಿತಾ, ಸುರೇಶ್, ಮತ್ತು ಧನರಾಜ್ ಅವರನ್ನು ನಾಮಿನೇಟ್ ಮಾಡಿದರು. ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಟಫ್ ಕಾಂಪಿಟೇಟರ್‌ಗಳಾಗಿರುವುದರಿಂದ, ಯಾರಿಗೆ ಹೆಚ್ಚಿನ ವೋಟ್ ಸಿಗುತ್ತದೋ ಅವರ ಮುಂದಿನ ಗತಿ ನಿರ್ಧಾರವಾಗಲಿದೆ.
ಹನುಮಂತ ಹಾಗೂ ಧನರಾಜ್ ಉತ್ತಮ ಗೆಳೆಯರಾಗಿದ್ದರೂ, ಹನುಮಂತನ ನಾಮಿನೇಶನ್ ತೀರ್ಮಾನ ಧನರಾಜ್‌ಗೆ ಶಾಕ್ ನೀಡಿದೆ. ಈ ನಿರ್ಣಯದಿಂದ ಧನರಾಜ್ ಆತಂಕಗೊಂಡು, "ನಾನೇ ಹೊರ ಹೋದ್ರೆ?" ಎಂದು ಪ್ರಶ್ನೆ ಮಾಡಿದ್ದಾರೆ. ಹನುಮಂತ, "ಜನರ ವೋಟ್ ನಿಂದಲೆ ನಿನಗೆ ನಿರ್ಣಯ ಆಗುತ್ತದೆ" ಎಂದು ಧೈರ್ಯ ನೀಡಿದರೂ, ಧನರಾಜ್‌ಗೆ ಹನುಮಂತ ಹೇಳಿದ ಮಾತು ಪೂರಕವಾಗುವುದಾ ಎಂಬುದೇ ಪ್ರಶ್ನೆ.
ಪರೀಕ್ಷಣಾ ಘಟ್ಟದಲ್ಲಿ ಇರುವ ಧನರಾಜ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಆ ಕಠಿಣ ಸ್ಪರ್ಧೆಯಲ್ಲಿ ಧನರಾಜ್ ಉಳಿಯುತ್ತಾರಾ, ಅಥವಾ ಅವರ ಬಿಗ್ ಬಾಸ್ ಪ್ರಯಾಣ ಇಲ್ಲಿ ಕೊನೆಗೊಳ್ಳುತ್ತದೆಯಾ ಎಂಬುದು ಈ ವಾರದ ಎಲಿಮಿನೇಷನ್‌ನಲ್ಲಿ ತೀರ್ಮಾನವಾಗಲಿದೆ.