Back to Top

ದರ್ಶನ್‌ಗೆ ಶೂರಿಟಿ ನೀಡಿದ ಸಹೋದರರು 2 ಲಕ್ಷ ಡೆಪಾಸಿಟ್‌ ಮಾಡಿ ಜೈಲು ಬಿಡುಗಡೆಗೆ ತಯಾರಿ

SSTV Profile Logo SStv October 30, 2024
ದರ್ಶನ್‌ಗೆ ಶೂರಿಟಿ ನೀಡಿದ ಸಹೋದರರು
ದರ್ಶನ್‌ಗೆ ಶೂರಿಟಿ ನೀಡಿದ ಸಹೋದರರು
ದರ್ಶನ್‌ಗೆ ಶೂರಿಟಿ ನೀಡಿದ ಸಹೋದರರು 2 ಲಕ್ಷ ಡೆಪಾಸಿಟ್‌ ಮಾಡಿ ಜೈಲು ಬಿಡುಗಡೆಗೆ ತಯಾರಿ ನಟ ದರ್ಶನ್ ತೂಗುದೀಪಗೆ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದ್ದು, ಅವರ ಸಹೋದರ ದಿನಕರ್ ತೂಗುದೀಪ್ ಹಾಗೂ ಆಪ್ತ ಧನ್ವೀರ್ ಗೌಡ ಶೂರಿಟಿ ನೀಡಿದ್ದಾರೆ. ಜಾಮೀನು ಪಡೆಯಲು ಅವರು 2 ಲಕ್ಷ ರೂಪಾಯಿ ಡೆಪಾಸಿಟ್‌ ಇಟ್ಟು, ಸೆಷನ್ಸ್‌ ಕೋರ್ಟ್‌ ಸೂಚನೆಯಂತೆ ಪಾಸ್‌ಪೋರ್ಟ್‌ ವಶಕ್ಕೆ ಒಪ್ಪಿಸಿದ್ದಾರೆ. ಜಾಮೀನಿನ ಷರತ್ತುಗಳಂತೆ ದರ್ಶನ್‌ ತಮ್ಮ ವೈದ್ಯಕೀಯ ವರದಿಯನ್ನು 1 ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಕುಟುಂಬಸ್ಥರು ಈಗಾಗಲೇ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದು, ಇಂದು ಸಂಜೆ ದರ್ಶನ್‌ ಅವರನ್ನು ಮನೆಗೆ ಕರೆತರಲು ತಯಾರಾಗಿದ್ದಾರೆ.