ದರ್ಶನ್‌ಗೆ ಮೆಡಿಕಲ್ ಗ್ರೌಂಡ್ಸ್ ಮೇಲೆ ಜಾಮೀನು ಸಿಗಬಹುದಾ?


ದರ್ಶನ್‌ಗೆ ಮೆಡಿಕಲ್ ಗ್ರೌಂಡ್ಸ್ ಮೇಲೆ ಜಾಮೀನು ಸಿಗಬಹುದಾ? ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ಗೆ ಜಾಮೀನು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗ ಬೆನ್ನು ನೋವು ಮೆಡಿಕಲ್ ಗ್ರೌಂಡ್ ಮೇಲೆ ಜಾಮೀನು ದೊರಕಬಹುದೇ ಎಂಬ ಚರ್ಚೆ ಏರ್ಪಟ್ಟಿದೆ. ಇಂದು ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಯಾಗಲಿದ್ದು, ನಟನ ಭವಿಷ್ಯ ತೀರ್ಮಾನವಾಗಲಿದೆ.
ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಈ ವಿಚಾರಣೆಯನ್ನು ನಡೆಸಲಿದ್ದು, ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ನಟನ ಮೆಡಿಕಲ್ ವರದಿಯನ್ನು ಇಂದು ಹೈಕೋರ್ಟ್‌ಗೆ ಸಲ್ಲಿಸಲಾಗುತ್ತಿದೆ. ಬಿಮ್ಸ್ ಆಸ್ಪತ್ರೆಯ ವೈದ್ಯರಿಂದ ನಡೆದ ಎಂಆರ್‌ಐ ಪರೀಕ್ಷೆಯ ಬಳಿಕ ದರ್ಶನ್ ಬೆನ್ನುನೋವಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಜಾಮೀನು ನಿರ್ಣಯವಾಗುವ ನಿರೀಕ್ಷೆಯಿದೆ.
ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮೆಡಿಕಲ್ ಆಧಾರದ ಮೇಲೆ ಜಾಮೀನು ಅರ್ಜಿ ಮಂಡನೆ ಮಾಡಿದ್ದು, ನಟನಿಗೆ ಈ ಆಧಾರದ ಮೇಲೆ ಜಾಮೀನು ಸಿಗುವ ಸಾಧ್ಯತೆಯತ್ತ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.