ನಟ ದರ್ಶನ್ ವಿರುದ್ಧ ಲಾಯರ್ ಜಗದೀಶ್ ದೂರು


ನಟ ದರ್ಶನ್ ವಿರುದ್ಧ ಲಾಯರ್ ಜಗದೀಶ್ ದೂರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದುಕೊಂಡಿರುವ ನಟ ದರ್ಶನ್ ವಿರುದ್ಧ, ಇತ್ತೀಚೆಗೆ ಬಿಗ್ ಬಾಸ್‌ನಿಂದ ಹೊರಬಂದಿರುವ ಲಾಯರ್ ಜಗದೀಶ್ ಅವರು ಹೊಸದೊಂದು ದೂರು ದಾಖಲಿಸಿದ್ದಾರೆ. ದರ್ಶನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೀಡಿದ ಟೀಕೆಗೆ ಪ್ರತಿಯಾಗಿ ದರ್ಶನ್ ಅಭಿಮಾನಿಗಳಿಂದ ತೀವ್ರ ನಿಂದನೆ ಮತ್ತು ಬೆದರಿಕೆಗಳು ಬಂದಿವೆ ಎಂಬುದಾಗಿ ಜಗದೀಶ್ ದೂರು ದಾಖಲಿಸಿದ್ದಾರೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಜಗದೀಶ್, "ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ನನ್ನ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳು ಹಾಕಿದ್ದಾರೆ, ಅಲ್ಲದೆ, ಸಾವಿರಕ್ಕೂ ಹೆಚ್ಚು ಕರೆಗಳು ಬಂದಿದ್ದು, ರಿಷಿ ಎಂಬ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ" ಎಂದು ಹೇಳಿದ್ದಾರೆ.
ಜಗದೀಶ್ ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಗಾಗಿ ಪೊಲೀಸರಿಂದ ರಕ್ಷಣೆ ಕೋರಿ, ದರ್ಶನ್ ಹಾಗೂ ಬೆದರಿಕೆ ಹಾಕಿದ ಅಭಿಮಾನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.