ಪರಪ್ಪನ ಅಗ್ರಹಾರದಲ್ಲಿ ದಾಸ ರಾಜಾತಿಥ್ಯ ಪ್ರಕರಣ ದರ್ಶನ್ ವಿಚಾರಣೆಗಾಗಿ ಬಳ್ಳಾರಿ ಜೈಲಿಗೆ ಅಧಿಕಾರಿಗಳ ಭೇಟಿ


ಪರಪ್ಪನ ಅಗ್ರಹಾರದಲ್ಲಿ ದಾಸ ರಾಜಾತಿಥ್ಯ ಪ್ರಕರಣ ದರ್ಶನ್ ವಿಚಾರಣೆಗಾಗಿ ಬಳ್ಳಾರಿ ಜೈಲಿಗೆ ಅಧಿಕಾರಿಗಳ ಭೇಟಿ ಹೆಚ್ಚು ಸುದ್ದಿಯಾಗಿರುವ ಪರಪ್ಪನ ಅಗ್ರಹಾರ ಜೈಲು ರಾಜಾತಿಥ್ಯ ಪ್ರಕರಣದ ವಿಚಾರಣೆಗಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ತಮ್ಮ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಜೈಲಿನಲ್ಲಿದ್ದಾಗ ಸಿಗರೇಟ್ ಮತ್ತು ಮೊಬೈಲ್ ಬಳಸಿದ ಬಗ್ಗೆ ಖ್ಯಾತಿ ಪಡೆದ ದರ್ಶನ್ ಮೇಲೆ ಈಗ ಗಂಭೀರ ವಿಚಾರಣೆ ನಡೆಯುತ್ತಿದೆ.
ಬಳ್ಳಾರಿ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ನಡೆದ ಈ ವಿಚಾರಣೆಯಲ್ಲಿ ದರ್ಶನ್ ಅವರನ್ನು ಚಂದ್ರಗುಪ್ತ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. "ಮೊಬೈಲ್ ಯಾರದ್ದು? ಜೈಲಿನ ನಿಯಮಗಳು ನಿಮಗೆ ಗೊತ್ತಿಲ್ಲವೇ?" ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಸಿಗರೇಟ್ ಮತ್ತು ಮೊಬೈಲ್ ಬಳಸಿದ ಸಂದರ್ಭಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ.
ಈ ನಡುವೆ ರಾಜಾತಿಥ್ಯದ ಬಗ್ಗೆ ಫೋಟೋಗಳ ಲೀಕ್ ಆಗಿರುವ ವಿಚಾರ ಮತ್ತು ವಿಲ್ಸನ್ ಗಾರ್ಡನ್‌ನ ನಾಗನ ಜತೆ ದರ್ಶನ್ ಸಂಬಂಧವನ್ನು ಕುರಿತು ಹೆಚ್ಚುವರಿಯಾಗಿ ಪ್ರಶ್ನೆಗಳು ಕೇಳಲಾಗಿದೆ. ಚಂದ್ರಗುಪ್ತ ಅವರ ಈ ಚೊಚ್ಚಲ ಪ್ರಶ್ನೆಗಳ ಮುಂದೆ ದರ್ಶನ್ ತತ್ತರಿಸಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಈ ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಹೇಳಿದ್ದು, ಮುಂದಿನ ಕ್ರಮದ ಬಗ್ಗೆ ನಿರೀಕ್ಷೆಯಿದೆ.