ದರ್ಶನ್ ಕೇಸ್ ಎಫೆಕ್ಟ್: ಜೈಲಲ್ಲಿ ಸಿಗರೇಟ್ ಸೇದುವವರಿಗೆ ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಗಂಭೀರ ತೀರ್ಪು ನೀಡಿದೆ. ಹೈಕೋರ್ಟ್ ಆದೇಶದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ, ಜೈಲಿನಲ್ಲಿ ಆರೋಪಿ ದರ್ಶನ್‌ಗೆ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳ ಕುರಿತು ಕಿಡಿಕಾರಿದೆ.
ಜೈಲು ಅಧಿಕಾರಿಗಳು ಭವಿಷ್ಯದಲ್ಲಿ ಇಂತಹ ಅನುಚಿತ ಸೌಲಭ್ಯ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ವಿಶೇಷವಾಗಿ, ಜೈಲಿನಲ್ಲಿ ಯಾರೇ ಖೈದಿ ಸಿಗರೇಟ್ ಸೇದಿದರೆ ಅಥವಾ ಅದರ ಫೋಟೋ ಸೋರಿಕೆಯಾದರೆ, ಸಂಬಂಧಿಸಿದ ಜೈಲು ಅಧಿಕಾರಿಗಳ ಮೇಲೆ ನೇರ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಆದೇಶದಿಂದ ರಾಜ್ಯದ ಎಲ್ಲಾ ಹೈಕೋರ್ಟ್ ಮತ್ತು ಜೈಲುಗಳಿಗೆ ಎಚ್ಚರಿಕೆಯ ಗಂಟೆ ಮೊಳಗಿದೆ.