ದರ್ಶನ್–ಪವಿತ್ರಾ ಗೌಡಗೆ ಸುಪ್ರೀಂ ಕೋರ್ಟ್ ಶಾಕ್ – ಇಂದೇ ಸರೆಂಡರ್ ಆಗಬೇಕಾದ ದರ್ಶನ್


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡಗೆ ಸುಪ್ರೀಂ ಕೋರ್ಟ್ ಭಾರೀ ಹೊಡೆತ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ತೀರ್ಪನ್ನು ರದ್ದುಪಡಿಸಿ, ತಕ್ಷಣವೇ ಕೋರ್ಟ್‌ಗೆ ಸರೆಂಡರ್ ಆಗುವಂತೆ ಆದೇಶ ಹೊರಡಿಸಿದೆ.
ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ತೀರ್ಪು ಬಂದಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಕೂಡ ತಕ್ಷಣವೇ ಸರೆಂಡರ್ ಆಗಬೇಕು, ಇಲ್ಲವಾದರೆ ಪೊಲೀಸರು ಬಂಧಿಸುವಂತೆ ಕೋರ್ಟ್ ಆದೇಶಿಸಿದೆ.
‘ಡೆವಿಲ್’ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ದರ್ಶನ್‌ಗೆ ಇದು ದೊಡ್ಡ ಶಾಕ್ ಆಗಿದ್ದು, ಮತ್ತೆ ಜೈಲು ಪಾಲಾಗುವ ಪರಿಸ್ಥಿತಿ ಎದುರಾಗಿದೆ.