ದರ್ಶನ್‌ಗೆ ಆರೋಗ್ಯ ಆಧಾರದ ಮೇಲೆ ಮಧ್ಯಂತರ ಜಾಮೀನು ವಕೀಲರ ಮಾಹಿತಿ


ದರ್ಶನ್‌ಗೆ ಆರೋಗ್ಯ ಆಧಾರದ ಮೇಲೆ ಮಧ್ಯಂತರ ಜಾಮೀನು ವಕೀಲರ ಮಾಹಿತಿ ನಟ ದರ್ಶನ್ ತೂಗುದೀಪಗೆ ಕೊನೆಗೂ 6 ವಾರಗಳ ಮಧ್ಯಂತರ ಜಾಮೀನು ಲಭ್ಯವಾಗಿದೆ. ದರ್ಶನ್ ಪರ ವಕೀಲರಾದ ಸುನಿಲ್ ಅವರು ಈ ಕುರಿತು ಮಾತನಾಡಿದ್ದು, ದರ್ಶನ್ ಅವರ ತೀವ್ರ ಬೆನ್ನು ನೋವಿನ ಸಮಸ್ಯೆಯನ್ನು ಪರಿಗಣಿಸಿ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
“ದರ್ಶನ್ ಅವರ ಎಲ್5 ಮತ್ತು ಎಸ್1 ಭಾಗದಲ್ಲಿ ಸಮಸ್ಯೆ ಇದೆ, ಹಾಗೂ ತುರ್ತು ಚಿಕಿತ್ಸೆಯ ಅಗತ್ಯವಿದೆ. ಈ ಆರೋಗ್ಯ ಸಮಸ್ಯೆ ಈಗ ಬಂದದ್ದೇನೂ ಅಲ್ಲ, 2022-23ರಿಂದಲೇ ಈ ಸಮಸ್ಯೆ ಕಾಡುತ್ತಿದೆ,” ಎಂದಿದ್ದಾರೆ ವಕೀಲ ಸುನಿಲ್.
ದರ್ಶನ್ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಕುಟುಂಬವು ನಿರ್ಧರಿಸಬಹುದು, ಮತ್ತು ಅದಾದಮೇಲೆ ದೃಢೀಕರಣದ ವಿವರಗಳನ್ನು ಕೋರ್ಟ್ ಗೆ ಸಲ್ಲಿಸಲಾಗುವುದು. ಈ ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ, ದರ್ಶನ್‌ಗಾಗಿ ನಿಯಮಿತ ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಲಾಗುವುದು ಎಂದು ಸುನಿಲ್ ಅವರು ಸ್ಪಷ್ಟಪಡಿಸಿದ್ದಾರೆ.