ಜೈಲಿನಲ್ಲಿ ರಾಜಾತಿಥ್ಯ ಇಲ್ಲ! ಸೆಲ್‌ನಲ್ಲೇ ವಾಕ್ ಮಾಡುತ್ತಿರುವ ದರ್ಶನ್


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಇದೀಗ ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಜೈಲು ಆಡಳಿತ ಕಟ್ಟೆಚ್ಚರ ವಹಿಸಿದ್ದು, ಈ ಬಾರಿ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಿಲ್ಲ.
ಮುಂಬರದಂತೆ ಕೈದಿಗಳ ಜೊತೆ ಸ್ವೈರಿಯಾಗಿ ಸಮಯ ಕಳೆಯುವ ಅವಕಾಶ ಈಗ ದೊರಕಿಲ್ಲ. ದರ್ಶನ್ ತಮ್ಮ ಸೆಲ್‌ನಲ್ಲೇ ವಾಕ್ ಮಾಡುತ್ತಿದ್ದು, ಸಿಬ್ಬಂದಿ ನೀಡಿರುವ ತೆಳುವಾದ ಬೆಡ್ ಮೇಲೆಯೇ ನಿದ್ರೆ ಮಾಡುತ್ತಿದ್ದಾರೆ. ಸಹಚರರೊಂದಿಗೆ ಸಂಭಾಷಣೆ ತಪ್ಪಿಸಿಕೊಂಡು, ದಿನಪತ್ರಿಕೆ ಓದುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಈ ಬಾರಿ ದರ್ಶನ್‌ಗೆ ಜೈಲಿನಲ್ಲಿ ಯಾವುದೇ ‘ರಾಜಾತಿಥ್ಯ’ ಸಿಗುತ್ತಿಲ್ಲ.