ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಬೇಡ: "ಪ್ರತಿದಿನ ವಿಚಾರಣೆ ಅಸಾಧ್ಯ" ದರ್ಶನ್ ಪರ ವಕೀಲರ ವಾದ


ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಇದೀಗ ಜೈಲು ಜೀವನದಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದು, ಅವರು ಬೇರೆ ಹಾಸಿಗೆ, ಬೆಡ್‌ಶೀಟ್ ಹಾಗೂ ತಲೆದಿಂಬು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತ ವಿಚಾರಣೆ ಸೆಪ್ಟೆಂಬರ್ 3ರಂದು ಸಂಜೆ 4 ಗಂಟೆಗೆ ಮುಂದೂಡಿಕೆಯಾಗಿದೆ.
ಈ ಹಿಂದೆ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈಗ ಮತ್ತೆ ಬಳ್ಳಾರಿಗೆ ಕಳಿಸಬೇಕು ಎಂದು ಸರ್ಕಾರದ ಪರ ವಾದಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು. ಆದರೆ ದರ್ಶನ್ ಪರ ವಕೀಲರಾದ ಸಂದೇಶ್ ಚೌಟ ಇದನ್ನು ತೀವ್ರವಾಗಿ ವಿರೋಧಿಸಿದರು.
ಅವರ ಪ್ರಕಾರ,
- ಪ್ರಕರಣದಲ್ಲಿ 272 ಸಾಕ್ಷಿಗಳು ಇದ್ದು, ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆ ನಡೆಸಲು ಸೂಚಿಸಿದೆ.
- ಪ್ರತಿ ವಿಚಾರಣೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಬರುವುದು ಅಸಾಧ್ಯ.
- ವಕೀಲರ ಜೊತೆ ನೇರವಾಗಿ ಮಾತನಾಡಲು ಅಗತ್ಯವಿದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಅದು ಸಾಧ್ಯವಿಲ್ಲ.
- ಸಿಗರೇಟ್ ವಿಚಾರ – ವಕೀಲರ ವಾದ
ದರ್ಶನ್ ಪರ ವಕೀಲರು, ಜೈಲಿನಲ್ಲಿ ಸ್ಮೋಕಿಂಗ್ ಜೋನ್ ಇದ್ದರೆ ಅಲ್ಲಿ ಸಿಗರೇಟ್ ಸೇದುವುದು ಕಾನೂನಿನ ಅಡಿ ತಪ್ಪಲ್ಲ ಎಂದು ವಾದಿಸಿದರು. ಆದರೆ ಹಿಂದೆ ದರ್ಶನ್ ಸಿಗರೇಟ್ ಹಿಡಿದ ಫೋಟೋ ಬಯಲಾಗಿದ್ರಿಂದ ಶಿಫ್ಟ್ ಮಾಡಲಾಗಿತ್ತು. “ಸಿಗರೇಟ್ ಸೇದುವುದಕ್ಕೆ ಅನುಮತಿ ಇದೆ ಎಂದಾದರೆ, ಅದೇ ಕಾಯ್ದೆಯಡಿ ಬೇರೆ ಜೈಲಿಗೆ ಶಿಫ್ಟ್ ಮಾಡುವುದೂ ಸರಿಯಲ್ಲ” ಎಂದು ಅವರು ಅಭಿಪ್ರಾಯಪಟ್ಟರು. ದರ್ಶನ್ ಬೇರೆ ಹಾಸಿಗೆ, ದಿಂಬು, ಬೆಡ್‌ಶೀಟ್ ಬೇಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಕೀಲರು,
“ಕಾನೂನು ಪ್ರಕಾರ ಸಿಗುವ ಸೌಲಭ್ಯವನ್ನು ವಿಚಾರಣಾಧೀನ ಕೈದಿಗೆ ನೀಡಬೇಕು. ಯಾವ ಕಾನೂನಿನ ಅಡಿಯಲ್ಲಿ ಕೊಡಲಾಗುವುದಿಲ್ಲವೆಂದು ಸ್ಪಷ್ಟನೆ ನೀಡಲಿ” ಎಂದು ಕೋರಿದರು.
ಸರ್ಕಾರದ ವಾದ, ಸರ್ಕಾರದ ಪರ ವಾದಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳುವಂತೆ –
- ದರ್ಶನ್ ಜೈಲು ಸೇರಿದ ಎರಡು ದಿನಗಳಲ್ಲೇ ಅರ್ಜಿ ಹಾಕಲಾಗಿದೆ.
- ಕರ್ನಾಟಕ ಪ್ರಿಸನರ್ಸ್ ಕಾಯ್ದೆ ಅಡಿಯಲ್ಲಿ ಸೌಲಭ್ಯ ಕೇವಲ ಅಪರಾಧಿಗಳಿಗೆ ಮಾತ್ರ ಅನ್ವಯಿಸುತ್ತದೆ, ವಿಚಾರಣಾಧೀನ ಕೈದಿಗಳಿಗೆ ಅಲ್ಲ.
- ತಮ್ಮ ಖರ್ಚಿನಲ್ಲಿ ಹಾಸಿಗೆ, ದಿಂಬು ಪಡೆಯಬಹುದು, ಆದರೆ ಅಂತಿಮ ತೀರ್ಮಾನ ಕಾರಾಗೃಹ ಇನ್ಸ್ಪೆಕ್ಟರ್ ಜನರಲ್ ಅವರದ್ದು.
- ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಕ್ಕೆ ಯಾವುದೇ ಅಡ್ಡಿ ಇಲ್ಲ, ಕಾನೂನು ಈಗಾಗಲೇ ಅದಕ್ಕೆ ಅವಕಾಶ ನೀಡಿದೆ.
ಈ ಕುರಿತ ಅಂತಿಮ ವಿಚಾರಣೆ ಸೆಪ್ಟೆಂಬರ್ 3 ರಂದು ಸಂಜೆ 4 ಗಂಟೆಗೆ ನಡೆಯಲಿದೆ.
Related posts
Recent posts
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!

"ಮುತ್ತರಸ" ನಾದ ಮಡೆನೂರ್ ಮನು: ಹುಟ್ಟುಹಬ್ಬದ ದಿನದಂದೇ ಸಿನಿರಂಗದ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣ
