“ಯಾವ ಪೂಜೆ, ಹರಕೆ ಫಲಿಸಲಿಲ್ಲ” – ಕಣ್ಣೀರು ಹಾಕಿದ ದರ್ಶನ್ ಆಪ್ತ ಗೆಳತಿ!


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದು, ನಟ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನು ರದ್ದುಗೊಂಡಿದೆ. ಈ ತೀರ್ಪು ದರ್ಶನ್ ಆಪ್ತ ವಲಯಕ್ಕೆ ಭಾರೀ ಆಘಾತ ತಂದಿದ್ದು, ವಿಶೇಷವಾಗಿ ನಟನ ಆತ್ಮೀಯ ಗೆಳತಿ ರಕ್ಷಿತಾ ಭಾವುಕರಾಗಿದ್ದಾರೆ.
“ಯಾವ ಹರಕೆ, ಯಾವ ಪೂಜೆ ಫಲಿಸಲಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ. ದರ್ಶನ್ ಬಿಡುಗಡೆಗಾಗಿ ಹಲವು ವಿಧದ ಧಾರ್ಮಿಕ ಕ್ರಿಯೆಗಳು ನಡೆದಿದ್ದರೂ, ಸುಪ್ರೀಂ ಆದೇಶವು ಎಲ್ಲಾ ಭರವಸೆಗಳನ್ನು ಮುರಿದಂತಾಗಿದೆ.
ಇದೇ ವೇಳೆ, ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಬರೆಯುತ್ತಾ, ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿಕೊಳ್ಳುವಂತೆ ಸಂದೇಶ ನೀಡಿದ್ದಾರೆ. ಹಿಂದೆಯೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದಕ್ಕಾಗಿ ತಮಗೆ ಬಂದ ಧಮ್ಕಿ ಹಾಗೂ ಅಶ್ಲೀಲ ಸಂದೇಶಗಳ ಬಗ್ಗೆ ಕಾನೂನು ಕ್ರಮ ಕೈಗೊಂಡಿದ್ದ ರಮ್ಯಾ, ಈಗಿನ ತೀರ್ಪನ್ನು ಬಲವಾದ ಸಂದೇಶವೆಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ದರ್ಶನ್ ಹಾಗೂ ಅವರ ಸಹಆರೋಪಿಗಳು ಮತ್ತೆ ಜೈಲಿನ ದಾರಿಯನ್ನು ಹಿಡಿಯಬೇಕಾಗಿದೆ.