ಅಡ್ಡಬಂದ ಅಮವಾಸ್ಯೆ ದರ್ಶನ್ ಚಿಕಿತ್ಸೆ ಯೋಜನೆಗೆ ಬದಲಾವಣೆ


ಅಡ್ಡಬಂದ ಅಮವಾಸ್ಯೆ ದರ್ಶನ್ ಚಿಕಿತ್ಸೆ ಯೋಜನೆಗೆ ಬದಲಾವಣೆ ನಟ ದರ್ಶನ್ ತೂಗುದೀಪ ಜೈಲಿನಿಂದ ಬಿಡುಗಡೆಯಾದ ಬಳಿಕ ಅನಾರೋಗ್ಯದ ಕಾರಣ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಮನೆಗೆ ಹಿಂದಿರುಗಿದ್ದಾರೆ. ಅಕ್ಟೋಬರ್ 31ರಂದು ತಮ್ಮ ಪುತ್ರ ವಿನೀಶ್ ಹುಟ್ಟುಹಬ್ಬ ಹಾಗೂ ನಾಳೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅವರು ಇನ್ನು ಕೆಲವು ದಿನ ಆಸ್ಪತ್ರೆಗೆ ಹೋಗದೇ, ಮನೆಯವರ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ.
ದರ್ಶನ್ ಬಳ್ಳಾರಿಯಿಂದ ಬೆಂಗಳೂರಿಗೆ ತಡ ರಾತ್ರಿ ಆಗಮಿಸಿದರೂ, ರಾಜರಾಜೇಶ್ವರಿ ನಗರದ ಮನೆಯ ಬದಲಿಗೆ ಪತ್ನಿಯ ಮನೆಗೆ ತೆರಳಿದ್ದಾರೆ. ಅಮವಾಸ್ಯೆ ದಿನ ಕಳೆಯುತ್ತಿದ್ದೇವೆಂಬ ಕಾರಣಕ್ಕೆ ಕೆಲವು ದಿನ ನಂತರವೇ ಆಸ್ಪತ್ರೆ ಗೆ ತೆರಳಿ ಚಿಕಿತ್ಸೆ ಪ್ರಾರಂಭಿಸುವ ಯೋಜನೆ ಮಾಡಿಕೊಂಡಿದ್ದಾರೆ.
ಈಗ ದರ್ಶನ್ ಬೆನ್ನಿನ ಎಲ್1-ಎಲ್5 ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದು, ತಕ್ಷಣವೇ ಚಿಕಿತ್ಸೆ ಅವಶ್ಯಕ ಎಂದು ವೈದ್ಯರು ಹೇಳಿದ್ದಾರೆ.