ನಾವೇನು ಚಿಕ್ಕ ಹುಡುಗರಾ? ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟದ್ದು ಏನು?


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ (ಸೆಪ್ಟೆಂಬರ್ 2) ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡರು. ವಿಶೇಷವಾಗಿ ನಟ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. "ನಾವೇನು ಚಿಕ್ಕವರಲ್ಲ. ನಾವು ದೂರಾದ್ವಿ ಅಂದ್ರೆ ಅದಕ್ಕೆ ಕಾರಣ ನಮಗೆ ಗೊತ್ತಿದೆ. ನಮ್ಮಿಬ್ಬರ ನಡುವೆ ಇರುವ ವಿಷಯಗಳನ್ನು ಯಾರೂ ತಿಳಿಯೋದಿಲ್ಲ. ಆದರೆ ನಮಗೆ ಮಾತ್ರ ಗೊತ್ತಿದೆ. ಯಾರದ್ದೋ ಮಾತು ಕೇಳಿಕೊಂಡು ನಾವು ಹೀಗಾಗಿಲ್ಲ. ನಮ್ಮದೇ ಕಾರಣಗಳಿವೆ" ಎಂದು ಸುದೀಪ್ ಸ್ಪಷ್ಟನೆ ನೀಡಿದರು.
"ದರ್ಶನ್ ಅವರ ಸಿನಿಮಾಗೆ ಒಳ್ಳೇದಾಗಲಿ ಅಂತಲೇ ನಾನು ಬಯಸುತ್ತೇನೆ. ಅವರಿಗೆ ಅವರದೇ ಆದ ನೋವು ಇರುತ್ತೆ. ಅವರ ಹಿಂದೆ ಅಭಿಮಾನಿಗಳ ನಂಬಿಕೆ ಇರುತ್ತೆ. ಅಂತಹ ಸಂದರ್ಭದಲ್ಲಿ ನಾವು ತಪ್ಪಾಗಿ ಏನನ್ನಾದರೂ ಮಾತನಾಡಿದರೆ ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನಾನು ಅನಗತ್ಯವಾಗಿ ತಲೆ ಹಾಕುವುದಿಲ್ಲ. ಏಕೆಂದರೆ, ನಾನು ವೈಯಕ್ತಿಕವಾಗಿ ಆಸಕ್ತಿ ಹೊಂದಿಲ್ಲ. ಮಾತಾಡಿದ್ರೆ ಕೆಲವು ಬಾರಿ ಅಂತರ ಸೃಷ್ಟಿಯಾಗುತ್ತದೆ" ಎಂದರು. ಸುದೀಪ್ ತಮ್ಮ ಹೇಳಿಕೆಯಲ್ಲಿ ಒಂದು ಗಂಭೀರ ಹೋಲಿಕೆಯನ್ನು ಕೊಟ್ಟರು. "ಸೂರ್ಯ–ಚಂದ್ರ ತನ್ನ ಜಾಗದಲ್ಲಿ ಎರಡು ಚೆನ್ನಾಗೇ ಇರುತ್ತವೆ. ನಾವು ಇಬ್ಬರೂ ಅಷ್ಟೇ. ನಾವ್ಯಾಕೆ ಹೀಗೆ ಇದ್ದೀವಿ ಅನ್ನೋದು ನಮ್ಮಿಗೇ ಗೊತ್ತು. ಹೊರಗಿನವರಿಗೆ ವಿವರಿಸಲು ಬೇಡ" ಎಂದು ಅವರು ಅಭಿಮಾನಿಗಳಿಗೆ ಅರ್ಥಮಾಡಿಕೊಟ್ಟರು.
ಸೆಪ್ಟೆಂಬರ್ 1ರ ರಾತ್ರಿ 9ರಿಂದ 12ರವರೆಗೆ, ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಜೊತೆ ಆಚರಿಸಲಿದ್ದಾರೆ. ಪ್ರತೀ ವರ್ಷ ಹಾಗೆಯೇ ಈ ಬಾರಿ ಕೂಡ ಸಾವಿರಾರು ಅಭಿಮಾನಿಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆಂದು ನಿರೀಕ್ಷಿಸಲಾಗಿದೆ.
ಒಟ್ಟಾರೆ, ಕಿಚ್ಚ ಸುದೀಪ್ ಅವರ ದರ್ಶನ್ ಕುರಿತು ನೀಡಿದ ಪ್ರತಿಕ್ರಿಯೆ ಮತ್ತೆ ಚರ್ಚೆಗೆ ಕಾರಣವಾಗಿದ್ದು, “ಸೂರ್ಯ–ಚಂದ್ರ” ಹೋಲಿಕೆಯ ಮಾತು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡಿಂಗ್ ಆಗಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
