ಸೆಷನ್ಸ್ ಕೋರ್ಟ್, ಸುಪ್ರೀಂ ಕೋರ್ಟ್ – ಎರಡೂ ಕಡೆ ದರ್ಶನ್ ಗ್ಯಾಂಗ್‌ಗೆ ಕಾನೂನು ಒತ್ತಡ


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಹಾಗೂ ಇತರ ಆರೋಪಿಗಳು ಇಂದು (ಆಗಸ್ಟ್ 11) ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್‌ಗೆ ಹಾಜರಾದರು. ಚಾರ್ಜ್‌ಶೀಟ್ ವಿಚಾರಣೆಗಾಗಿ ನಡೆದ ಈ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಈ ಪ್ರಕರಣದಲ್ಲಿ ಇಂದು ಟ್ರಯಲ್ ದಿನಾಂಕ ನಿಗದಿ ಆಗುವ ನಿರೀಕ್ಷೆಯಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದು, ಟ್ರಯಲ್ ಎಷ್ಟು ದಿನದಲ್ಲಿ ಮುಗಿಸುವಿರಿ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು. ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.
ಚಾರ್ಜ್ ಫ್ರೇಮ್ ಹಂತದಲ್ಲಿ, ಯಾವ ಸೆಕ್ಷನ್‌ಗಳಡಿ ಆರೋಪ ಹೊರಿಸಲಾಗುತ್ತದೆ ಎಂಬುದರ ಕುರಿತು ಕೋರ್ಟ್‌ನಲ್ಲಿ ವಾದ ನಡೆಯಲಿದೆ. ಹೀಗಾಗಿ, ದರ್ಶನ್ ಮತ್ತು ಗ್ಯಾಂಗ್‌ಗಾಗಿ ಸೆಷನ್ಸ್ ಕೋರ್ಟ್ ಟ್ರಯಲ್ ಮತ್ತು ಸುಪ್ರೀಂ ಕೋರ್ಟ್ ಬೇಲ್ ವಿಚಾರಣೆ – ಎರಡೂ ಕಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.