200 ರೂ. ಸಿನಿಮಾ ಟಿಕೆಟ್ ದರದ ವಿರುದ್ಧ ಕೋರ್ಟ್ ಮೊರೆಹೋದ ಮಲ್ಟಿಪ್ಲೆಕ್ಸ್ ಒಕ್ಕೂಟ


ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯ ಮುನ್ನವೇ ಟಿಕೆಟ್ ದರ ವಿವಾದ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರ 200 ರೂ. ಗರಿಷ್ಠ ಟಿಕೆಟ್ ದರ ನಿಗದಿ ಮಾಡಿರುವುದು ಮಲ್ಟಿಪ್ಲೆಕ್ಸ್ ಒಕ್ಕೂಟಕ್ಕೆ ಅಸಮಾಧಾನ ತಂದಿದ್ದು, ಹೈಕೋರ್ಟ್ ಮೊರೆ ಹೋಗಲಾಗಿದೆ.
ಮೊದಲು ಇದ್ದ ದುಬಾರಿ ದರಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮ ಕೈಗೊಂಡಿದ್ದರೂ, ಮಲ್ಟಿಪ್ಲೆಕ್ಸ್ ಒಕ್ಕೂಟ ಇದರಿಂದ ಬಿಗ್ ಬಜೆಟ್ ಸಿನಿಮಾಗಳ ಕಲೆಕ್ಷನ್ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವಾದಿಸಿದೆ.
ಸೆಪ್ಟೆಂಬರ್ 16ರಂದು ಅರ್ಜಿಯ ವಿಚಾರಣೆ ನಡೆಯಲಿದ್ದು, ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಈ ತೀರ್ಪು ಮಹತ್ವದ್ದಾಗಿರಲಿದೆ. ಪ್ರೇಕ್ಷಕರಿಗೆ ಅನುಕೂಲವಾದರೂ, ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ಗಳಿಗೆ ಈ ನಿರ್ಧಾರ ಸವಾಲು ತಂದಿದೆ.